ಗ್ಯಾಂಗ್ಟಾಕ್: ಮಾಜಿ ಶಾಸಕರು ಇನ್ನು ಮುಂದೆ ಕನಿಷ್ಠ ಮಾಸಿಕ 50,000 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ.
ಸಿಕ್ಕಿಂನ ಮಾಜಿ ಶಾಸಕರ ಒಕ್ಕೂಟದ(ಎಫ್‌ಎಲ್‌ಎಫ್‌ಎಸ್) 22ನೇ ಸಂಸ್ಥಾಪನಾ ದಿನದಂದು ತಮಾಂಗ್ ಶನಿವಾರ ಈ ಘೋಷಣೆ ಮಾಡಿದ್ದಾರೆ. ಒಂದೇ ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ ಮಾಜಿ ಶಾಸಕರು ಈಗ ಮಾಸಿಕ 50 ಸಾವಿರ ಪಿಂಚಣಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಮಾಸಿಕ ಪಿಂಚಣಿಯಾಗಿ 22 ಸಾವಿರ ರೂ. ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಮಾಜಿ ಶಾಸಕರು ಈಗ 25,000 ರೂ.ನಿಂದ 55,000 ರೂ.ಗಳನ್ನು ಪಿಂಚಣಿಯಾಗಿ ಪಡೆಯುತ್ತಾರೆ ಎಂದು ತಮಾಂಗ್ ಹೇಳಿದರು.
ಸಿಕ್ಕಿಂನ ಮಾಜಿ ಶಾಸಕರ ಒಕ್ಕೂಟಕ್ಕೆ ಸಿಕ್ಕಿಂ ಸರ್ಕಾರ ವಾರ್ಷಿಕ 20 ಲಕ್ಷ ರೂಪಾಯಿ ಅನುದಾನ ನೀಡಲಿದೆ. ಈ ನಿಧಿಯು ಮಾಜಿ ಶಾಸಕರ ತುರ್ತು ಮತ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಬೆಂಬಲ ವ್ಯವಸ್ಥೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.