ಹೈದರಾಬಾದ್ ನ ಕುಕಟ್ಪಲ್ಲಿ ಎಂಬಲ್ಲಿ ಯುವಕನೊಬ್ಬ ಜನನಿಬಿಡ ರಸ್ತೆಯಲ್ಲಿ ಹಣ ಸುರಿದು ರೀಲ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.
ಹಣದ ಕಂತೆಯನ್ನು ಗಾಳಿಯಲ್ಲಿ ಎಸೆಯುವ ವೀಡಿಯೊ ವೈರಲ್ ಆಗಿದೆ. ‘its_me_power’ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಹಣ ರಸ್ತೆಯಲ್ಲಿ ಬೀಳುತ್ತಿದ್ದಂತೆ ಜನರು ಓಡಿಬಂದು ನೋಟುಗಳನ್ನು ಆರಿಸಿಕೊಂಡಿದ್ದಾರೆ.
ಎರಡೂ ಕೈಗಳಲ್ಲಿ ನೋಟುಗಳನ್ನು ಹಿಡಿದುಕೊಂಡು ರಸ್ತೆಯ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಅಲ್ಲಿ ಹಣವನ್ನು ಸುರಿದಿದ್ದಾನೆ. ಈ ಘಟನೆಯನ್ನು ದಾರಿಹೋಕರು ರೆಕಾರ್ಡ್ ಮಾಡಿದ್ದಾರೆ ಮತ್ತು ಅವರ ಸಹ ಸ್ನೇಹಿತ ಇದನ್ನು ಎಡಿಟ್ ಮಾಡಿ ಮ್ಯೂಸಿಕ್ ಹಾಕಿ ವಿಡಿಯೋ ಹರಿಬಿಟ್ಟಿದ್ದಾರೆ.
Dear @RachakondaCop @TelanganaDGP can u Warn such Chapris who are creating Nuisance on Roads in Name of Content??? pic.twitter.com/pEX3BLCeiq
— Mahesh Goud 🚩 #9999# (@indian66669296) August 21, 2024

