HomeEntertainment'ಟೇಕ್ವಾಂಡೋ ಗರ್ಲ್' ಚಿತ್ರದ ಈ ಜಗದಲ್ಲಿ ಹಾಡು ರಿಲೀಸ್

‘ಟೇಕ್ವಾಂಡೋ ಗರ್ಲ್’ ಚಿತ್ರದ ಈ ಜಗದಲ್ಲಿ ಹಾಡು ರಿಲೀಸ್

ರವೀಂದ್ರ ವೆಂಶಿ ನಿರ್ದೇಶನದ ‘ಟೇಕ್ವಾಂಡೋ ಗರ್ಲ್’ ಚಿತ್ರದ ಈ ಜಗದಲ್ಲಿ ಎಂಬ ಲಿರಿಕಲ್ ಸಾಂಗ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಲಿಖಿತ್ ಗಾಯಕ್ ಈ ಹಾಡಿಗೆ ಧ್ವನಿಯಾಗಿದ್ದು, ಎಮ್ ಎಸ್ ತ್ಯಾಗರಾಜ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಮನೋಜ್ ಸೌಗಂಧ್ ಅವರ ಸಾಹಿತ್ಯವಿದೆ.

ಮಹಿಳಾ ಪ್ರಧಾನ ಹೊಂದಿರುವ ‘ಟೇಕ್ವಾಂಡೋ ಗರ್ಲ್’  ಚಿತ್ರದಲ್ಲಿ ರುತು ಸ್ಪರ್ಶ ಸೇರಿದಂತೆ ಡಾ.ಸುಮಿತಾ ರಾವ್ಶಿ, ಪ್ರವೀಣ್ ಸಹಾವಿ, ಮಾ. ರವಿ, ರೇಖಾ ಕೂಡ್ಲಿಗಿ, ಸ್ವಾತಿ ಶಿವಮೊಗ್ಗ ಬಣ್ಣ ಹಚ್ಚಿದ್ದಾರೆ. ಡಾ. ಸುಮಿತಾ ಪ್ರವೀಣ್ ನಿರ್ಮಾಣ ಮಾಡಿದ್ದು, ಪ್ರವೀಣ್ ಸಿ ಬಾನು ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸಿ ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಹಾಗೂ ಮಾಸ್ಟರ್ ವಿಫಾ ರವಿ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular