ಬೆಂಗಳೂರು : ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವೆಚ್ಚದ ಹಣವನ್ನು ಅಧಿಕಾರಿಗಳು ಮಂಜೂರು ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ‘ಡಿ ಗ್ಯಾಂಗ್’ ತನಿಖಾ ತಂಡಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡ ತನಿಖೆಗೆ ಬೇಕಾಗಿರುವ ಹಾರ್ಡ್ ಡಿಸ್ಕ್ ಸೇರಿದಂತೆ ಎಲ್ಲಾ ವಸ್ತುಗಳ ಖರೀದಿಗೆ ತಮ್ಮ ಸ್ವಂತ ಹಣವನ್ನು ಬಳಸಿಕೊಂಡಿದ್ದರು. ಪ್ರಕರಣದ ಖರ್ಚನ್ನು ಪೊಲೀಸರೇ ಭರಿಸಿದ್ದು, ಬಿಲ್ ಮಂಜೂರು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದರು.. ಇದೀಗ ತನಿಖಾ ವೆಚ್ಚದ ಹಣವನ್ನು ಪೊಲೀಸ್ ಅಧಿಕಾರಿಗಳು ಮಂಜೂರು ಮಾಡಿದ್ದಾರೆ.
2.5 ಲಕ್ಷ ಹಣ ಮಂಜೂರು ಮಾಡುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಮನವಿ ಪತ್ರದಲ್ಲಿದ್ದಷ್ಟು ಹಣವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿದು ಬಂದಿದೆ.