ಲಖನೌ: ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ವೈದ್ಯ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಡಾ. ಶಹನವಾಜ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಆಸ್ಪತ್ರೆಯ ಪರವಾನಿಗೆ ರದ್ದುಗೊಳಿಸಿ ಬೀಗ ಹಾಕಿದ್ದಾರೆ.
ಭಾನುವಾರ ಸಂಜೆ 7 ಗಂಟೆಗೆ ದಲಿತ ಸಮುದಾಯಕ್ಕೆ ಸೇರಿದ ನರ್ಸ್ ಕೆಲಸಕ್ಕೆ ಹಾಜರಾಗಿದ್ದರು. ಅಂದು ರಾತ್ರಿ ಕೆಲಸ ಮುಗಿದ ನಂತರ ವೈದ್ಯ ಶಹನವಾಜ್ ಭೇಟಿಯಾಗುವಂತೆ ಅದೇ ಆಸ್ಪತ್ರೆಯ ಇನ್ನೊಬ್ಬ ನರ್ಸ್ ಮೆಹನಾವಾಜ್ ಸೂಚಿಸಿದ್ದಾಳೆ. ಇದಕ್ಕೆ ಸಂತ್ರಸ್ತೆ ಒಪ್ಪದಿದ್ದಾಗ ಮೆಹನಾಜ್ ಮತ್ತು ವಾರ್ಡ್ ಬಾಯ್ ಜುನೈದ್ ಸೇರಿಕೊಂಡು ಬಲವಂತವಾಗಿ ಮೇಲಿನ ಮಹಡಿಗೆ ಸಂತ್ರಸ್ತೆ ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ಅಲ್ಲಿಗೆ ಬಂದ ವೈದ್ಯ ಶಹನವಾಜ್ ಜಾತಿ ನಿಂದನೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ಮೆಹನಾಜ್ ಮತ್ತು ಜುನೈದ್ ಕೊಠಡಿಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡಿದ್ದರು. ಮೊಬೈಲ್ ಕಸಿದುಕೊಂಡಿದ್ದರು. ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.