HomeEntertainmentBREAKING : 'War 2' ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTR' ಗೆ ಗಂಭೀರ...

BREAKING : ‘War 2′ ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTR’ ಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು.!

War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಸೀಕ್ವೆಲ್ ವಾರ್ 2 ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಮಧ್ಯೆ ಜ್ಯೂನಿಯರ್ ಎನ್ಟಿಆರ್ ಅವರು ಸೆಟ್ ನಲ್ಲಿ ಗಾಯಗೊಂಡಿದ್ದು, ಅವರಿಗೆ ಎರಡು ತಿಂಗಳ ಬೆಡ್ ರೆಸ್ಟ್ ಗೆ ಸೂಚಿಸಲಾಗಿದೆ ಎಂಬ ವರದಿ ಬಂದಿದೆ. ಈ ಹಿನ್ನೆಲೆ ಜ್ಯೂನಿಯರ್ ಎನ್ಟಿಆರ್ ಭಾಗದ ಚಿತ್ರೀಕರಣ ಸದ್ಯಕ್ಕೆ ಮಾಡುವುದಿಲ್ಲ.

ಜೂನಿಯರ್ ಎನ್ಟಿಆರ್ ಅವರು ಆಕ್ಷನ್ ದೃಶ್ಯಕ್ಕಾಗಿ ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ .
ಹೀಗಾಗಿ ಎರಡು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್ ನ್ನು ಅಕ್ಟೋಬರ್ ಗೆ ಮುಂದೂಡಲಾಗಿದೆ. ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular