HomeEntertainmentಹೆಣ್ಣು ಮಕ್ಕಳು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಕುರಿತ ಸಂದೇಶವಿರುವ 'ಟೆಕ್ವಾಂಡೋ ಗರ್ಲ್' ಚಿತ್ರ ಆ.30 ಕ್ಕೆ...

ಹೆಣ್ಣು ಮಕ್ಕಳು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಕುರಿತ ಸಂದೇಶವಿರುವ ‘ಟೆಕ್ವಾಂಡೋ ಗರ್ಲ್’ ಚಿತ್ರ ಆ.30 ಕ್ಕೆ ರಿಲೀಸ್

ಹೆಣ್ಣು ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಎಂಬ ಕುರಿತ ಸಂದೇಶವಿರುವ ‘ಟೆಕ್ವಾಂಡೋ ಗರ್ಲ್’ ಎಂಬ ಚಿತ್ರ ಆಗಸ್ಟ್ 30ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಶುಕ್ರವಾರದಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರದ ನಿರ್ಮಾಪಕಿ ಸುಮಿತಾ ಪ್ರವೀಣ್ ಭಾನು ಈ ವಿಷಯ ತಿಳಿಸಿದ್ದಾರೆ.

ರವೀಂದ್ರ ವಂಶಿ ನಿರ್ದೇಶನದ ಈ ಚಿತ್ರದಲ್ಲಿ ಸುಮಿತಾ ಪ್ರವೀಣ್ ಅವರ ಪುತ್ರಿ ಋತುಸ್ಪರ್ಶ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಈಕೆ 8 ವರ್ಷ ಟೆಕ್ವಾಂಡೋ ಸಮರ ಕಲೆ ಕಲಿತಿದ್ದಾರೆ. ಅಲ್ಲದೆ ನಾಲ್ಕು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ.

ಋತುಸ್ಪರ್ಶ ಅವರು ಬಾಲ ನಟಿಯಾಗಿ ಈಗಾಗಲೇ ಕಾಂಗ್ರೋ, ಗಂಗೆ, ಗೌರಿ, ತಾರಕೇಶ್ವರ ಚಿತ್ರಗಳಲ್ಲಿ ಅಭಿನಯಿಸಿದ್ದು, ಇದೀಗ ‘ಟೆಕ್ವಾಂಡೋ ಗರ್ಲ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 50 ಲಕ್ಷ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಒಟ್ಟು ಎರಡು ಹಾಡುಗಳಿವೆ. ಬಾಲ ನಟಿ ಋತುಸ್ಪರ್ಶ, ಪ್ರವೀಣ್ ಭಾನು, ರಘು, ಶಶಿಕುಮಾರ್ ಮೊದಲಾದವರು ಚಿತ್ರದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular