HomeKarnatakaರಾಷ್ಟ್ರಧ್ವಜ ಇಳಿಸುವಾಗ ದುರಂತ: ಚರ್ಚ್ ಫಾದರ್ ದುರ್ಮರಣ

ರಾಷ್ಟ್ರಧ್ವಜ ಇಳಿಸುವಾಗ ದುರಂತ: ಚರ್ಚ್ ಫಾದರ್ ದುರ್ಮರಣ

ಕಾಸರಗೋಡು: ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವದ ಸಡಗರ-ಸಂಭ್ರಮ ಮನೆ ಮಾಡಿದ್ದು, ಈ ನಡುವೆ ಧ್ವಜಾರೋಹಣದ ಬಳಿಕ ಧ್ವಜ ಕೆಳಗಿಳಿಸುವ ವೇಳೆ ದುರಂತವೊಂದು ಸಂಭವಿಸಿ ಚರ್ಚ್ ಫಾದರ್ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಮುಳ್ಳೇರಿಯಲ್ಲಿ ನಡೆದಿದೆ.

ಮುಳ್ಳೇರಿಯ ಇನ್ ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಫಾದರ್ ಮ್ಯಾಥ್ಯೂ ಕುಡಿಲಿಲ್ (29) ಮೃತ ದುರ್ದೈವಿ. ರಾಷ್ಟ್ರಧ್ವಜ ಕೆಳಗಿಳಿಸುವಾಗ ವಿದ್ಯುತ್ ಸ್ಪರ್ಶಿಸಿ ಪಾದ್ರಿ ಸಾವನ್ನಪ್ಪಿದ್ದಾರೆ.

ಧ್ವಜ ಇಳಿಸುವಾಗ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಧ್ವಜ ಬಿಡಿಸಲು ಸಾಧ್ಯವಾಗಿಲ್ಲ. ಕಂಬವನ್ನು ಎತ್ತರಿಸಲೆಂದು ಎತ್ತಿದಾಗ ಕಂಬ ಒಂದು ಬದಿಗೆ ವಾಲಿದ್ದು, ವಿದ್ಯುತ್ ತಂತಿಗೆ ತಗುಲಿದೆ. ಹೈಟೆನ್ಶನ್ ವಿದ್ಯುತ್ ತಂತಿಯಿಂದ ಕರೆಂಟ್ ಶಾಕ್ ಹೊಡೆದು ಫಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular