HomeIndiaBREAKING : ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ, ಅ.1 ರಂದು ಮತದಾನ..!

BREAKING : ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ, ಅ.1 ರಂದು ಮತದಾನ..!

ನವದೆಹಲಿ : ಹರಿಯಾಣದಲ್ಲಿ ಅಕ್ಟೋಬರ್ 1 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 73 ಜನರಲ್, ಎಸ್ಸಿ 17 ಕ್ಷೇತ್ರಗಳಿದೆ.

ಹರಿಯಾಣದಲ್ಲಿ 2.01 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1.06 ಪುರುಷರು ಹಾಗೂ 0.95 ಮಹಿಳಾ ಮತದಾರರು ಇದ್ದಾರೆ.

7,132 ನಗರ ಮತ್ತು 13,497 ಗ್ರಾಮೀಣ ಸೇರಿದಂತೆ ಒಟ್ಟು 20,629 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಗುರುಗ್ರಾಮ್, ಸೋನೆಪತ್ ಮತ್ತು ಫರಿದಾಬಾದ್ನ ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಬೂತ್ಗಳನ್ನು ಸ್ಥಾಪಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರಿಯಾಣ ವಿಧಾನಸಭೆಯಲ್ಲಿ 73 ಸಾಮಾನ್ಯ ಮತ್ತು 17 ಪರಿಶಿಷ್ಟ ಜಾತಿ (ಎಸ್ಸಿ) ಸ್ಥಾನಗಳು ಸೇರಿದಂತೆ 90 ಸ್ಥಾನಗಳಿವೆ. 10,321 ಶತಾಯುಷಿ ಮತದಾರರು ಸಹ ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲಿದ್ದಾರೆ ಎಂದು ಕುಮಾರ್ ಘೋಷಿಸಿದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular