HomeLatest Newsಸ್ನಾಯು ಬಿಗಿತ ಕಡಿಮೆ ಮಾಡಲು ಅಭ್ಯಾಸ ಮಾಡಿ ಈ ಯೋಗ ಭಂಗಿ

ಸ್ನಾಯು ಬಿಗಿತ ಕಡಿಮೆ ಮಾಡಲು ಅಭ್ಯಾಸ ಮಾಡಿ ಈ ಯೋಗ ಭಂಗಿ

ಕೆಲವರಿಗೆ ತೊಡೆಗಳ ಹಿಂಭಾಗದಲ್ಲಿರುವ ಸ್ನಾಯುಗಳಲ್ಲಿ ಬಿಗಿತ ಮತ್ತು ಸೆಳೆತ ಕಂಡುಬರುತ್ತದೆ. ಇದರಿಂದ ಅವರಿಗೆ ತುಂಬಾ ನೋವಾಗುತ್ತಿರುತ್ತದೆ. ಹಾಗಾಗಿ ನಡೆಯುವುದು, ಓಡುವುದು ಮತ್ತು ಬಾಗುವುದು ಮುಂತಾದ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುತ್ತದೆ. ಇದು ಕೆಳ ಬೆನ್ನು ಮತ್ತು ಮೊಣಕಾಲು ನೋವಿಗೆ ಕಾರಣವಾಗಬಹುದು. ಈ ಬಿಗಿಯಾದ ಸ್ನಾಯುಗಳ ಸಮಸ್ಯೆಯನ್ನು ನಿವಾರಿಸಲು ಕೆಲವು ಯೋಗಗಳಿವೆ. ಅವು ಸ್ನಾಯು ಬಿಗಿತ, ಸೆಳೆತವನ್ನು ನಿವಾರಿಸಿ ಮತ್ತು ಸ್ನಾಯುಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಆ ಯೋಗ ಭಂಗಿಗಳ ಬಗ್ಗೆ ತಿಳಿದುಕೊಳ್ಳಿ.

ಪಾದಹಸ್ತಾಸನ: ನಿಮ್ಮ ಕಾಲುಗಳನ್ನು ಒಟ್ಟಿಗೆ ಸೇರಿಸಿ ನೇರವಾಗಿ ಇಟ್ಟು ನಿಮ್ಮ ಕೈಗಳನ್ನು 180 ಡಿಗ್ರಿ ರೇಖೆಯಲ್ಲಿ ಬಾಗಿಸಿ ಕಾಲ್ಬೆರಳುಗಳನ್ನು ಸ್ಪರ್ಶಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ. ಇದನ್ನು ದಿನಕ್ಕೆ 5 ಬಾರಿ ಮಾಡಿ.

ಪಶ್ಚಿಮೋತ್ತನಾಸನ : ಎರಡೂ ಕಾಲುಗಳನ್ನು ಹೊರಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳಿ. ಕಾಲ್ಬೆರಳುಗಳು ಒಟ್ಟಿಗೆ ಇರಲಿ, ನಂತರ ಉಸಿರಾಡುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ಮತ್ತು ದೇಹವನ್ನು ಸಾಧ್ಯವಾದಷ್ಟು ಮುಂದಕ್ಕೆ ಬಾಗಿಸಿ ಮತ್ತು ದೇಹವನ್ನು ಓರೆಯಾಗಿಸಿ. ಮುಂದಕ್ಕೆ ಬಾಗುವಾಗ ಉಸಿರನ್ನು ಬಿಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಇದನ್ನು ಎಲ್ಲರೂ ಮಾಡುವಂತಿಲ್ಲ. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಯೋಗ ಭಂಗಿಗಳನ್ನು ಮಾಡಬೇಡಿ. ತೀವ್ರವಾದ ಬೆನ್ನುನೋವು ಇರುವವರು, ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿರುವವರು ಈ ಯೋಗ ಭಂಗಿಗಳನ್ನು ತಪ್ಪಿಸಬೇಕು. ಹಾಗೇ ಗರ್ಭಿಣಿಯರು, ಸೊಂಟ, ಮೊಣಕಾಲುಗಳು ಅಥವಾ ಪಾದಗಳಲ್ಲಿ ತೀವ್ರವಾದ ಗಾಯಗಳನ್ನು ಹೊಂದಿರುವವರು ಈ ಯೋಗಗಳನ್ನು ಮಾಡಬೇಡಿ. ತಪ್ಪಿಸಬೇಕು.

For Latest News Updates, Join Our Whatsapp Community🚩
RELATED ARTICLES

Most Popular