alex Certify ಈ ರಾಶಿಚಕ್ರದಲ್ಲಿ ಜನಿಸಿದವರು ಉತ್ತಮ ಸಹೋದರ-ಸಹೋದರಿಯಾಗಿರುತ್ತಾರಂತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಚಕ್ರದಲ್ಲಿ ಜನಿಸಿದವರು ಉತ್ತಮ ಸಹೋದರ-ಸಹೋದರಿಯಾಗಿರುತ್ತಾರಂತೆ

ಹಿಂದೂ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ತನ್ನದೇ ಆದ ವಿಶೇಷತೆ ಮತ್ತು ಸ್ವಭಾವವನ್ನು ಹೊಂದಿದೆ. ಯಾವುದೇ ಸಂಬಂಧ ಉತ್ತಮವಾಗಿರಲು ಅದಕ್ಕೆ ರಾಶಿಚಕ್ರಗಳು ಪರಿಣಾಮ ಬೀರುತ್ತವೆಯಂತೆ. ಹಾಗಾಗಿ ನಮ್ಮ ಹಿರಿಯರು ಮದುವೆಗೂ ಮುನ್ನ ರಾಶಿಚಕ್ರ ಸರಿಹೊಂದುತ್ತದೆಯೇ ಎಂದು ಪರೀಕ್ಷಿಸುತ್ತಾರೆ. ಆದರೆ ಸಹೋದರ ಸಂಬಂಧ ಹುಟ್ಟಿನಿಂದ ಬೆಸೆದುಕೊಂಡ ಸಂಬಂಧವಾದ್ದರಿಂದ ರಾಶಿಚಕ್ರದ ಪ್ರಭಾವದಿಂದ ಎಲ್ಲಾ ಸಹೋದರ ಸಹೋದರಿಯರು ದೀರ್ಘಕಾಲ ಜೊತೆಯಾಗಿರುವುದಿಲ್ಲ. ಆದರೆ ಈ ರಾಶಿಚಕ್ರದಲ್ಲಿ ಜನಿಸಿದವರು ಮಾತ್ರ ಉತ್ತಮ ಸಹೋದರ-ಸಹೋದರಿಯಾಗಿರುತ್ತಾರಂತೆ ಮತ್ತು ಕೊನೆಯವರೆಗೂ ಜೊತೆಯಾಗಿರುತ್ತಾರಂತೆ.

ಮೇಷ ಮತ್ತು ಧನು ರಾಶಿ : ಮೇಷ ರಾಶಿಯವರು ಹಾಗೂ ಧನು ರಾಶಿಯವರು ಇಬ್ಬರೂ ಸಾಹಸ ಮತ್ತು ಉತ್ಸಾಹದಿಂದ ತುಂಬಿದ ಬಲವಾದ ಸಂಬಂಧವನ್ನು ಹೊಂದಿದ್ದಾರೆ. ಈ ಜೋಡಿ ಪರಸ್ಪರರ ಮಹತ್ವಾಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಪ್ರತಿಯೊಂದು ಸವಾಲನ್ನು ಒಟ್ಟಿಗೆ ಎದುರಿಸುತ್ತದೆ. ಅವರು ಯಾವಾಗಲೂ ಹೊಸ ಆಲೋಚನೆಗಳು ಮತ್ತು ಯೋಜನೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ವೃಷಭ ಮತ್ತು ಕನ್ಯಾ ರಾಶಿ : ಈ ಎರಡು ರಾಶಿಯ ಜನರು ಒಟ್ಟಾಗಿ ಆದರ್ಶ ಸಹೋದರ-ಸಹೋದರಿ ಜೋಡಿಯಾಗಬಹುದು. ವೃಷಭ ರಾಶಿಯವರು ಸ್ಥಿರ ಮತ್ತು ವಿಶ್ವಾಸಾರ್ಹರಾಗಿದ್ದರೆ, ಕನ್ಯಾ ರಾಶಿಯವರು ಸಮರ್ಪಣಾ ಭಾವ ಮತ್ತು ತಾಳ್ಮೆಯನ್ನು ಹೊಂದಿವರಾಗಿದ್ದಾರೆ. ವೃಷಭ ರಾಶಿಯವರು ಸಹೋದರಿ ಅಥವಾ ಸಹೋದರನನ್ನು ಸುರಕ್ಷಿತವಾಗಿರಿಸುತ್ತಾರೆ, ಮತ್ತು ಕನ್ಯಾ ರಾಶಿಯವರು ಪ್ರತಿಯೊಂದು ಪರಿಸ್ಥಿತಿಯನ್ನು ಪರಿಹರಿಸಲು ಸಹಾಯ ಮಾಡುತ್ತಾರೆ.

ಮಿಥುನ ಮತ್ತು ತುಲಾ ರಾಶಿ : ಮಿಥುನ ರಾಶಿಯವರು ತಮಾಷೆ ಮತ್ತು ಹೆಚ್ಚು ಮಾತುನಾಡುವವರಾಗಿದ್ದಾರೆ, ತುಲಾ ರಾಶಿಯವರು ಎಲ್ಲರನ್ನೂ ಸಮನಾಗಿ ಕಾಣುತ್ತಾರೆ. ಅವರು ಪರಸ್ಪರರ ಆಲೋಚನೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪರಸ್ಪರರ ಅಗತ್ಯಗಳನ್ನು ಪೂರೈಸುತ್ತಾರೆ.

ಕರ್ಕ ಮತ್ತು ಮೀನ : ಕರ್ಕಾಟಕ ಮತ್ತು ಮೀನ ರಾಶಿಯವರು ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಕರ್ಕಾಟಕ ರಾಶಿಯವರು ತಮ್ಮನ್ನು ರಕ್ಷಣೆ ಮತ್ತು ಆರೈಕೆ ಮಾಡುವವರನ್ನು ನಂಬುತ್ತಾರೆ, ಮತ್ತು ಮೀನ ರಾಶಿಯವರು ತಮಗೆ ಭಾವನಾತ್ಮಕ ಬೆಂಬಲ ಮತ್ತು ಸಹಾನುಭೂತಿಯನ್ನುತೋರಿಸುವವರನ್ನು ನಂಬುತ್ತಾರೆ. ಕರ್ಕ ಮತ್ತು ಮೀನ ಇಬ್ಬರೂ ಪರಸ್ಪರರ ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬೆಂಬಲವನ್ನು ನೀಡುತ್ತಾರೆ.

ಸಿಂಹ ಮತ್ತು ಮಕರ ರಾಶಿ : ಸಿಂಹ ಮತ್ತು ಮಕರ ರಾಶಿಯವರು ಪರಸ್ಪರರ ಸಾಮರ್ಥ್ಯಗಳನ್ನು ಗುರುತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಸಿಂಹ ರಾಶಿಯವರು ಆತ್ಮವಿಶ್ವಾಸಯುಳ್ಳವರಾಗಿದ್ದರೆ, ಮಕರ ರಾಶಿಯವರು ಕಠಿಣ ಪರಿಶ್ರಮಿಗಳಾಗಿದ್ದಾರೆ. ಸಿಂಹ ರಾಶಿಯವರು ಒಡಹುಟ್ಟಿದವರನ್ನು ಪ್ರೇರೆಪಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ, ಆದರೆ ಮಕರ ರಾಶಿಯವರು ದೃಢವಾದ ಯೋಜನೆಗಳು ಮತ್ತು ಕಾರ್ಯಗಳಿಗೆ ಬೆಂಬಲವನ್ನು ನೀಡುತ್ತಾರೆ. ಈ ಜೋಡಿಯು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಗುರಿಗಳನ್ನು ಮತ್ತು ಯಶಸ್ಸನ್ನು ಸಾಧಿಸಲು ಪರಸ್ಪರರಿಗೆ ಸಹಾಯ ಮಾಡುತ್ತಾರೆ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...