ಬೆಂಗಳೂರು : ಮನೆ ಮನೆಯಲ್ಲೂ ತ್ರಿವಣ ಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬಿಜೆಪಿ ಇಂದು ಚಾಲನೆ ನೀಡಿದೆ.
ಪ್ರಧಾನಿ ಮೋದಿಯವರ ಕರೆಯ ಮೇರೆಗೆ ಇಂದಿನಿಂದ ಆರಂಭವಾಗಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಂಗಳೂರಿನ ಶಿವಾಜಿನಗರದ ವಸಂತನಗರ ವಾರ್ಡ್ ನ ಬೂತ್ ಸಂಖ್ಯೆ 44 ರ ಅಧ್ಯಕ್ಷರಾದ ಎಂ. ಸಾಗರ್ ಅವರ ನಿವಾಸಕ್ಕೆ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರನವರು ಭೇಟಿ ನೀಡಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿ ಅವರ ನಿವಾಸದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರತಿ ಮನೆಯಲ್ಲೂ ಭಾರತದ ತ್ರಿವರ್ಣ ಧ್ವಜ ರಾರಾಜಿಸಬೇಕೆಂದು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿರಂಗಾ ಯಾತ್ರೆ ಕೂಡ ಆಯೋಜಿಸಲಾಗಿದೆ. ಆಗಸ್ಟ್ 11-15ವರೆಗೆ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ, ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಆಗಸ್ಟ್ 09 ರಿಂದ 15 ರ ವರೆಗೆ ಪ್ರತಿ ಮನೆಯಲ್ಲೂ ಎಲ್ಲರೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನವನ್ನು ಯಶಸ್ವಿಗೊಳಿಸಿ ಭವ್ಯ ಭಾರತದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಪ್ರತಿ ಮನೆಯಲ್ಲೂ ಭಾರತದ ತ್ರಿವರ್ಣ ಧ್ವಜ ರಾರಾಜಿಸಬೇಕೆಂದು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿರಂಗಾ ಯಾತ್ರೆ ಕೂಡ ಆಯೋಜಿಸಲಾಗಿದೆ. ಆಗಸ್ಟ್ 11-15ವರೆಗೆ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ, ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.
– ಶ್ರೀ… pic.twitter.com/qERlr0SNjE
— BJP Karnataka (@BJP4Karnataka) August 13, 2024

