HomeEntertainmentಇಂದು ಬಿಡುಗಡೆಯಾಗಲಿದೆ ಪ್ರಜ್ವಲ್ ದೇವರಾಜ್ ನಟನೆಯ 'ರಾಕ್ಷಸ' ಚಿತ್ರದ ಟೀಸರ್

ಇಂದು ಬಿಡುಗಡೆಯಾಗಲಿದೆ ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಚಿತ್ರದ ಟೀಸರ್

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹು ನಿರೀಕ್ಷಿತ ‘ರಾಕ್ಷಸ’ ಚಿತ್ರದ ಟೀಸರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಈ ಟ್ರೈಲರ್ ಬಿಡುಗಡೆಯಾಗಲಿದೆ.

ಲೋಹಿತ್ ಎಚ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸಾನ್ವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ದೀಪು ಬಿಎಸ್ ನಿರ್ಮಾಣ ಮಾಡಿದ್ದು, ನವೀನ್ ಹಾಗೂ ಮಾನಸ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಜ್ವಲ್ ದೇವರಾಜ್ ಸೇರಿದಂತೆ ಸೋಮಶೇಖರ್, ಕೃಷ್ಣ ಜಯಂತ್, ವಿಹಾನ್, ಶ್ರೀಧರ್, ಅರುಣ್ ರಾಥೋಡ್ ಹಾಗೂ ಗೌತಮ್ ಬಣ್ಣ ಹಚ್ಚಿದ್ದಾರೆ. ಸಿ ರವಿ ಚಂದ್ರನ್ ಅವರ ಸಂಕಲನ, ಜೇಬಿನ್ ಪಿ ಜೋಕಬ್ ಛಾಯಾಗ್ರಹಣ, ಹಾಗೂ ವಿನೋದ್ ಮತ್ತು ರಿಯಲ್ ಸತೀಶ್ ಸಾಹಸ ನಿರ್ದೇಶನವಿದೆ. ನೋಬಿನ್ ಪೌಲ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular