alex Certify VIRAL VIDEO: ನನ್ನ ಆಸ್ತಿ ವಿವರ ಬೇಕೆಂದರೆ ಸಿಬಿಐ ಅಥವಾ ಐಟಿ ಕಚೇರಿಗೆ ಹೋಗಿ; ಮಾಹಿತಿ ಕೇಳಿದ ವ್ಯಕ್ತಿಗೆ ಅಖಿಲೇಶ್ ಸಿಂಗ್ ಖಡಕ್ ಉತ್ತರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIRAL VIDEO: ನನ್ನ ಆಸ್ತಿ ವಿವರ ಬೇಕೆಂದರೆ ಸಿಬಿಐ ಅಥವಾ ಐಟಿ ಕಚೇರಿಗೆ ಹೋಗಿ; ಮಾಹಿತಿ ಕೇಳಿದ ವ್ಯಕ್ತಿಗೆ ಅಖಿಲೇಶ್ ಸಿಂಗ್ ಖಡಕ್ ಉತ್ತರ…!

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್, ತಮ್ಮ ಆಸ್ತಿ ವಿವರ ಕೇಳಿದ ವ್ಯಕ್ತಿಯೊಬ್ಬರಿಗೆ ಈ ಬಗ್ಗೆ ಮಾಹಿತಿ ಬೇಕೆಂದರೆ ಸಿಬಿಐ ಅಥವಾ ಐಟಿ ಕಚೇರಿಗೆ ಹೋಗಿ. ಅಲ್ಲಿ ನಿಮಗೆ ಸಂಪೂರ್ಣ ವಿವರ ಸಿಗುತ್ತದೆ. ನಾನು ಕಳೆದ 20 ವರ್ಷಗಳಿಂದ ಸಿಬಿಐ ನಿಗಾದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದ್ದ ಸ್ವದೇಶ್ -2024 ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರಿಗೆ ಸಭಿಕರೊಬ್ಬರು ನಿಮ್ಮ ಆಸ್ತಿ ಎಷ್ಟು ಎಂದು ಕೇಳಿದರು. ಈ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು ಇದಕ್ಕೆ ಉತ್ತರ ಬೇಕೆಂದರೆ ಸಿಬಿಐ ಅಥವಾ ಐಟಿ ಕಚೇರಿಗೆ ಹೋಗಿ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಏಳು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ನಾನು ಫಕೀರ. ಅಧಿಕಾರದಿಂದ ಹೋಗುವಾಗ ಒಂದು ಜೋಳಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ ಹೇಳಿಕೆಯನ್ನು ಮೋದಿಯವರ ಹೆಸರು ಹೇಳದೆ ವ್ಯಂಗ್ಯವಾಡಿದ ಅಖಿಲೇಶ್ ಯಾದವ್, ನಾನು ಕೂಡ ಫಕೀರ. ಜೋಳಿಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

— Sanket Upadhyay (@sanket) August 8, 2024

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...