alex Certify ಮದುವೆಯಾದ ಬಳಿಕ ಮಚ್ಚಿನಲ್ಲಿ ಹೊಡೆದಾಡಿಕೊಂಡಿದ್ದ ವರನೂ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಬಳಿಕ ಮಚ್ಚಿನಲ್ಲಿ ಹೊಡೆದಾಡಿಕೊಂಡಿದ್ದ ವರನೂ ಸಾವು

ಕೋಲಾರ: ಪರಸ್ಪರ ಪ್ರೀತಿಸಿ ಬುಧವಾರ ಬೆಳಗ್ಗೆ ಮದುವೆಯಾಗಿದ್ದ ನವ ವಧು-ವರರು ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡು ಸಾವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಧು ನಿನ್ನೆ ಸಂಜೆ ಸಾವನ್ನಪ್ಪಿದ್ದು, ವರ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಕೆಜಿಎಫ್ ತಾಲೂಕಿನ ಆಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಜಿಎಫ್ ತಾಲೂಕಿನ ಬೈನೇಹಳ್ಳಿ ನಿವಾಸಿ ಲಿಖಿತಶ್ರೀ(18) ಮೃತ ವಧು. ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ನವೀನ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಚಂಬರಸನಹಳ್ಳಿಯ ನವೀನ್ ಕುಮಾರ್ ಅವರ ಅಕ್ಕನ ಮನೆಯಲ್ಲಿ ಮದುವೆ ನೆರವೇರಿ,ದ್ದು ಮದುವೆಯ ನಂತರ ಅದೇ ಗ್ರಾಮದ ವರನ ದೊಡ್ಡಪ್ಪನ ಮನೆಗೆ ಲಿಖಿತಶ್ರೀ ಮತ್ತು ನವೀನ್ ಕುಮಾರ್ ತೆರಳಿದ್ದಾರೆ. ಕೋಣೆಯ ಬಾಗಿಲು ಹಾಕಿಕೊಂಡು ಪರಸ್ಪರ ಮಚ್ಚಿನಲ್ಲಿ ಹಲ್ಲೆ ಮಾಡಿಕೊಂಡಿದ್ದಾರೆ. ನಿನ್ನೆ ಕೆಜಿಎಫ್ ಆಸ್ಪತ್ರೆಯಲ್ಲಿ ಲಿಖಿತಶ್ರೀ ಮೃತಪಟ್ಟಿದ್ದು, ಇಂದು ನವೀನ್ ಕುಮಾರ್ ಕೊನೆಯುಸಿರೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...