alex Certify BREAKING: ಪ್ಯಾರಿಸ್ ಒಲಿಂಪಿಕ್ಸ್ ನಿಂದ ವಿನೇಶ್ ಪೋಗಟ್ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ: ಶಿಸ್ತು ಉಲ್ಲಂಘಿಸಿದ ಕುಸ್ತಿಪಟು ಆಂಟಿಮ್ ಪಂಗಲ್, ಸಹಾಯಕ ಸಿಬ್ಬಂದಿ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪ್ಯಾರಿಸ್ ಒಲಿಂಪಿಕ್ಸ್ ನಿಂದ ವಿನೇಶ್ ಪೋಗಟ್ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ: ಶಿಸ್ತು ಉಲ್ಲಂಘಿಸಿದ ಕುಸ್ತಿಪಟು ಆಂಟಿಮ್ ಪಂಗಲ್, ಸಹಾಯಕ ಸಿಬ್ಬಂದಿ ವಾಪಸ್

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತನ್ನ ಸಹೋದರಿಗೆ ಒಲಿಂಪಿಕ್ ವಿಲೇಜ್ ಮಾನ್ಯತೆ ಕಾರ್ಡ್ ನೀಡಿ ಶಿಸ್ತು ಉಲ್ಲಂಘಿಸಿದ ಕಾರಣ ಕುಸ್ತಿಪಟು ಆಂಟಿಮ್ ಪಂಗಲ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ನಿರ್ಧರಿಸಿದೆ.

ಫ್ರೆಂಚ್ ಅಧಿಕಾರಿಗಳು ವರದಿ ಮಾಡಿದಂತೆ ಆಂಟಿಮ್ ಮತ್ತು ಅವರ ಬೆಂಬಲ ಸಿಬ್ಬಂದಿ ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು IOA ಹೇಳಿಕೆ ನೀಡಿದೆ.

ಶಿಸ್ತಿನ ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು IOA ಗಮನಕ್ಕೆ ತಂದ ನಂತರ ಕುಸ್ತಿಪಟು ಆಂಟಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ವಾಪಸ್ ಕಳಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ ನಿರ್ಧರಿಸಿದೆ ಎಂದು IOA ತಿಳಿಸಿದೆ.

ಆಂಟಿಮ್ ಪಂಗಲ್ ತನ್ನ ಸಹೋದರಿಗೆ ಒಲಿಂಪಿಕ್ ಗೇಮ್ಸ್ ಗ್ರಾಮವನ್ನು ಪ್ರವೇಶಿಸಲು ಸಹಾಯ ಮಾಡಲು ಮಾನ್ಯತೆ ನೀಡಿದ ನಂತರ ಫ್ರೆಂಚ್ ಅಧಿಕಾರಿಗಳು IOA ಗೆ ದೂರು ನೀಡಿದ್ದಾರೆ. ಭಾರತೀಯ ಕುಸ್ತಿಪಟು ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು IOA ದೃಢಪಡಿಸಿದೆ.

ಆಂಟಿಮ್ ಪಂಗಲ್ ತನಗೆ ನೀಡಿದ ಮಾನ್ಯತೆಯನ್ನು ಕ್ರೀಡಾ ಗ್ರಾಮವನ್ನು ಪ್ರವೇಶಿಸಲು ತನ್ನ ಸಹೋದರಿಗೆ ಸಹಾಯ ಮಾಡಿದ್ದು, ಫ್ರೆಂಚ್ ಅಧಿಕಾರಿಗಳು IOAಗೆ ದೂರು ನೀಡಿದ್ದಾರೆ ಮತ್ತು ಅದಕ್ಕಾಗಿಯೇ ಅವರನ್ನು ತನ್ನ ಸಹಾಯಕ ಸಿಬ್ಬಂದಿಯೊಂದಿಗೆ ಭಾರತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ.

ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಸುತ್ತಿನ 16 ಬೌಟ್‌ನಲ್ಲಿ ಆಂಟಿಮ್ ಪಂಗಲ್ ಟರ್ಕಿಯ ಝೆನೆಪ್ ಯೆಟ್ಗಿಲ್ ವಿರುದ್ಧ ಸೋತರು.

ಖ್ಯಾತ ಕುಸ್ತಿ ಪಟು ವಿನೇಶ್ ಫೋಗಟ್ ಬುಧವಾರ ತೂಕದ ಮಾರ್ಕ್ ಉಲ್ಲಂಘಿಸಿದ್ದಕ್ಕಾಗಿ 50 ಕೆಜಿ ಮಹಿಳಾ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿದ್ದು, ನಿವೃತ್ತಿ ಘೋಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...