‘ಅತಿ ಸುಂದರಿ’ ಎನ್ನುವ ಕಾರಣಕ್ಕೆ ಒಲಂಪಿಕ್ಸ್ ನಿಂದ ಮನೆಗೆ ಕಳುಹಿಸಿದ್ರಾ ಈಕೆಗೆ ? ಹರಿದಾಡುತ್ತಿದೆ ಹೀಗೊಂದು ಸುದ್ದಿ….!

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಬೇಸಿಗೆ ಒಲಿಂಪಿಕ್ಸ್ 2024 ರ ಅತಿದೊಡ್ಡ ಕ್ರೀಡಾಕೂಟದಿಂದ ಪ್ರತಿದಿನ ಅನೇಕ ಆಸಕ್ತಿದಾಯಕ ಮತ್ತು ಕೆಲವೊಮ್ಮೆ ವಿಚಿತ್ರ ಸುದ್ದಿಗಳು ಹೊರಬರುತ್ತಿವೆ. ವರದಿಗಳ ಪ್ರಕಾರ, ಪರಾಗ್ವೆಯ 20 ವರ್ಷದ ಈಜುಗಾರ್ತಿ ಲುವಾನಾ ಅಲೋನ್ಸೊ ಅವರನ್ನು ಒಲಿಂಪಿಕ್ ವಿಲೇಜ್‌ನಲ್ಲಿರುವ ತನ್ನ ಕೊಠಡಿಯನ್ನು ಖಾಲಿ ಮಾಡುವಂತೆ ಕೇಳಿದ್ದಲ್ಲದೆ, ಮನೆಗೆ ವಾಪಸ್ ಕಳುಹಿಸಲಾಗಿದೆ. ಇದಕ್ಕೆ ನೀಡಿರುವ ಕಾರಣ ಬೆಚ್ಚಿ ಬೀಳಿಸುವಂತಿದೆ.

ವರದಿಯ ಪ್ರಕಾರ, ಲುವಾನಾ ಅಲೋನ್ಸೊ ಅವರನ್ನು ಅವರ ತವರು ಪರಾಗ್ವೆಗೆ ವಾಪಸ್‌ ಕಳುಹಿಸಲಾಗಿದೆ. ಏಕೆಂದರೆ ಅವರು ತುಂಬಾ ಸುಂದರವಾಗಿರೋದು ಇದಕ್ಕೆ ಕಾರಣ.

ಕ್ರೀಡಾಪಟುವಿನ ಸೌಂದರ್ಯ ಆಟಗಾರರ ಗಮನವನ್ನು ಸೆಳೆಯುತ್ತಿದೆ ಎಂದು ಆಟಗಾರರು ದೂರಿದ್ದರು. ಇದ್ರಿಂದ ಆಟಗಾರರ ಗಮನ ಆಟದ ಬದಲು ಆಟಗಾರ್ತಿಯ ಮೇಲೆ ಹರಿಯುತ್ತಿತ್ತು. ಇದನ್ನು ಮನಗಂಡ ಅಧಿಕಾರಿಗಳು  ಅವರನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.

ಈ ಮಧ್ಯೆ ಲುವಾನಾ ಅಲೋನ್ಸೊ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಯದಲ್ಲಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಫೈನಲ್ ತಲುಪುವ ಮುನ್ನವೇ ಸ್ಪರ್ಧೆಯಿಂದ ಹೊರಬಿದ್ದ ಅವರು ಈ ನಿರ್ಧಾರ ಕೈಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read