HomeIndiaಕಾಂಬೋಡಿಯನ್ ನ 16 ವರ್ಷದ ಬಾಲಕಿಗೆ ಹಕ್ಕಿ ಜ್ವರ ಧೃಡ |Bird Flu

ಕಾಂಬೋಡಿಯನ್ ನ 16 ವರ್ಷದ ಬಾಲಕಿಗೆ ಹಕ್ಕಿ ಜ್ವರ ಧೃಡ |Bird Flu

ನವದೆಹಲಿ : ಆಗ್ನೇಯ ಕಾಂಬೋಡಿಯಾದ ಸ್ವೇ ರಿಯೆಂಗ್ ಪ್ರಾಂತ್ಯದ 16 ವರ್ಷದ ಬಾಲಕಿಗೆ ಎಚ್ 5 ಎನ್ 1 ಹಕ್ಕಿ ಜ್ವರ ಇರುವುದು ದೃಢಪಟ್ಟಿದ್ದು, 2024 ರ ಆರಂಭದಿಂದ ಒಟ್ಟು ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

“ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ಪ್ರಯೋಗಾಲಯ ಫಲಿತಾಂಶಗಳು ಶನಿವಾರ ಬಾಲಕಿಗೆ ಎಚ್ 5 ಎನ್ 1 ವೈರಸ್ ಇರುವುದು ತೋರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.”ಪ್ರಸ್ತುತ, ರೋಗಿಯು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ವೈದ್ಯರ ತಂಡದಿಂದ ತೀವ್ರ ನಿಗಾ ಪಡೆಯುತ್ತಿದ್ದಾರೆ” ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ರೋಗಿಯು ಜ್ವರ, ಕೆಮ್ಮು, ಗಂಟಲು ನೋವು ಲಕ್ಷಣಗಳನ್ನು ಹೊಂದಿದ್ದಳು. ಬಾಲಕಿ ಅನಾರೋಗ್ಯಕ್ಕೆ ಒಳಗಾಗುವ ನಾಲ್ಕು ದಿನಗಳ ಮೊದಲು, ಹಳ್ಳಿಯಲ್ಲಿ ಮತ್ತು ಅವಳ ಮನೆಯಲ್ಲಿ ಒಟ್ಟು ಒಂಬತ್ತು ಕೋಳಿಗಳು ಮತ್ತು ಬಾತುಕೋಳಿಗಳು ಸಾವನ್ನಪ್ಪಿದ್ದವು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular