HomeKarnatakaನಿಧಿ ಆಸೆಗಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ ದೇವಸ್ಥಾನದ ಬಂಡೆ ಕೊರೆದ ದುಷ್ಕರ್ಮಿಗಳು

ನಿಧಿ ಆಸೆಗಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ ದೇವಸ್ಥಾನದ ಬಂಡೆ ಕೊರೆದ ದುಷ್ಕರ್ಮಿಗಳು

ತುಮಕೂರು: ನಿಧಿ ಆಸೆಗಾಗಿ ಕೆಲ ದುಷ್ಕರ್ಮಿಗಳು ದೇವಸ್ಥಾನ ಬಳಿಯ ಮೂರು ಬಂಡೆಗಳನ್ನೇ ಕೊರೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ವಡ್ಡರಹಳ್ಳಿ ಗ್ರಾಮದ ಬನವಾಸಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕೆಲ ಕಿಡಿಗೇಡಿಗಳು ನಿಧಿ ಶೋಧ ನಡೆಸಿದ್ದಾರೆ. ರಾತ್ರಿ ಬೆಳಗಾಗುವಷ್ಟರಲ್ಲಿ ದೇವಸ್ಥಾನ ಬಳಿ ಇರುವ ಬಂಡೆ ಕೊರೆದು, ಅರಿಷಿಣ, ಕುಂಕುಮ, ತೆಂಗಿನಕಾಯಿ, ವಸ್ತ್ರಗಳನ್ನಿಟ್ಟು ಪೂಜೆ ಮಾಡಿದ್ದಾರೆ.

ದೇವಸ್ಥಾನಕ್ಕೆ ಬೆಳಿಗ್ಗೆ ಪೂಜೆಗೆ ಬಂದ ಅರ್ಚಕ್ಅರು ಇದನು ಕಂಡು ಬೆಚ್ಚಿ ಬಿದ್ದಿದ್ದಾರೆ. ಭಕ್ತರು ಹಾಗೂ ಗ್ರಾಮಸ್ಥರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular