HomeKarnatakaಕೇಂದ್ರೀಯ ವಿವಿ ಕುಲಪತಿ, ಕುಲಸಚಿವರ ವಿರುದ್ಧ FIR ದಾಖಲು

ಕೇಂದ್ರೀಯ ವಿವಿ ಕುಲಪತಿ, ಕುಲಸಚಿವರ ವಿರುದ್ಧ FIR ದಾಖಲು

ಕಲಬುರ್ಗಿ: ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಬಟ್ಟೂ ಸತ್ಯನಾರಾಯಣ ಹಾಗೂ ಕುಲಸಚಿವ ರುದ್ರಗೌಡ ಬಿರಾದಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ವಿಸ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಗೆ ಜಾತಿ ನಿಂದನೆ ಮಾಡಿದ ಆರೋಪದಡಿ ನರೋಣ ಪೊಲೀಸ್ ಠಾಣೆಯಲ್ಲಿ ವಿದ್ಯರಥಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿವಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ವೇಳೆ ವಿದ್ಯಾರ್ಥಿ ನಂದಕುಮಾರ್ ವಿವಿಗೆ ಆಗಮಿಸಿದ್ದರು ಈ ವೇಳೆ ಕುಲಪತಿ ಹಾಗೂ ಕುಲಸಚಿವರು ಹೇಳಿದ್ದಾರೆ ಎಂದು ವಿದ್ಯಾರ್ಥಿಯನ್ನು ಗೇಟ್ ಬಳಿಯೇ ಸೆಕ್ಯೂರಿಟಿ ತಡೆದು, ವಿವಿ ಪ್ರವೇಶಕ್ಕೆ ಬಿಟ್ಟಿರಲಿಲ್ಲ. ಜಾತಿ ನಿಂದನೆ ಮಾಡಿ ವಿವಿ ಒಳಗೆ ನನ್ನನ್ನು ಬಿಟ್ಟಿಲ್ಲ ಎಂದು ನಂದಕುಮಾರ್ ದೂರು ನೀಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular