HomeInternationalVIDEO: ಹನಿಮೂನ್ ನಲ್ಲಿರುವ ಅನಂತ್ ಅಂಬಾನಿ- ರಾಧಿಕಾ; ಫ್ಯಾನ್ಸ್ ಬೇಡಿಕೆಗೆ ಪ್ರತಿಕ್ರಿಯಿಸಿದ ರೀತಿಗೆ ಭಾರೀ ಮೆಚ್ಚುಗೆ

VIDEO: ಹನಿಮೂನ್ ನಲ್ಲಿರುವ ಅನಂತ್ ಅಂಬಾನಿ- ರಾಧಿಕಾ; ಫ್ಯಾನ್ಸ್ ಬೇಡಿಕೆಗೆ ಪ್ರತಿಕ್ರಿಯಿಸಿದ ರೀತಿಗೆ ಭಾರೀ ಮೆಚ್ಚುಗೆ

ಸಾಲು ಸಾಲು ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳ ಬಳಿಕ ಜುಲೈ 12 ರಂದು ಮದುವೆಯಾದ ಏಷ್ಯಾದ ಅತಿದೊಡ್ಡ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ಅವರ ಪತ್ನಿ ರಾಧಿಕಾ ಮರ್ಚೆಂಟ್ ಇದೀಗ ಫ್ರಾನ್ಸ್ ನಲ್ಲಿ ಹನಿಮೂನ್ ನಲ್ಲಿದ್ದಾರೆ. ನವಜೋಡಿ ಕೈ ಕೈ ಹಿಡಿದು ಪ್ಯಾರಿಸ್ ನಲ್ಲಿ ಸುತ್ತಾಡುತ್ತಿದ್ದು ಹಲವು ಫೋಟೋ, ವಿಡಿಯೋಗಳು ವೈರಲ್ ಆಗಿವೆ. ಪ್ಯಾರಿಸ್ ಒಲಿಂಪಿಕ್ಸ್ 2024 ವೀಕ್ಷಿಸುತ್ತಿರುವ ದಂಪತಿ ಮುದ್ದಾಗಿ ಕಾಣುತ್ತಿದ್ದು, ಅವರ ಇತ್ತೀಚಿನ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೈರಲ್ ವೀಡಿಯೊದಲ್ಲಿ, ಫೋಟೋ ತೆಗೆದುಕೊಳ್ಳಲು ಹತ್ತಿರ ಬಂದ ಅಭಿಮಾನಿಗಳನ್ನು ಕಂಡು ಅನಂತ್ ಅಂಬಾನಿ ತನ್ನ ಕಾರಿನಿಂದ ಇಳಿದು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಮುಗುಳ್ನಗುತ್ತಾ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ನಿಮಗೆ ಫ್ರೆಂಚ್ ಬರುತ್ತದೆಯೇ ಎಂದು ಕೇಳಿದ್ದಕ್ಕೆ ಇಲ್ಲ ಎಂದು ಉತ್ತರಿಸಿದ ಅನಂತ್ ಅಂಬಾನಿ, ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದ ಅಭಿಮಾನಿಗಳೊಂದಿಗೆ ಪೋಸ್ ನೀಡಿದರು. ಸ್ಥಳದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಅಭಿಮಾನಿಯೊಬ್ಬ ಫೋಟೋ ತೆಗೆದುಕೊಳ್ಳಬಹುದೇ ಎಂದು ಕೇಳಿದಾಗ ಅನಂತ್ ಅಂಬಾನಿ ಪ್ರೀತಿಯಿಂದ ಬಾ ಬಾ ಎಂದು ಕರೆದರು. ಇದೇ ವೇಳೆ ನೆರೆದಿದ್ದ ಅಭಿಮಾನಿಗಳನ್ನು ನೋಡಿ ರಾಧಿಕಾ ಮುಗುಳ್ನಕ್ಕರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular