ಜಪಾನ್ ಕಂಪನಿ ಸುಜುಕಿ ಮೋಟಾರ್ ಕಾರ್ಪೊರೇಷನ್ ದ್ವಿಚಕ್ರ ವಾಹನ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ಒಂದೇ ತಿಂಗಳಲ್ಲಿ ಸುಜುಕಿ ಕಂಪನಿಯು ದ್ವಿಚಕ್ರ ವಾಹನಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿವೆ. ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಜುಲೈ ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಸೇಲ್ಸ್ ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಾಗಿದೆ.
ಮಾರುತಿ ಸುಜುಕಿ ಇಂಡಿಯಾದ 1,16,714 ದ್ವಿಚಕ್ರ ವಾಹನಗಳು ಜುಲೈನಲ್ಲಿ ಮಾರಾಟವಾಗಿವೆ. ಜುಲೈ 2023 ರಲ್ಲಿ, ಕಂಪನಿಯು ಈ ವಿಭಾಗದಲ್ಲಿ 1,07,836 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕೇವಲ ಒಂದು ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಒಂದು ಲಕ್ಷ ಯುನಿಟ್‌ಗಳ ಮಾರಾಟದ ಗಡಿಯನ್ನು ದಾಟಿರುವುದು ವಿಶೇಷ. ಕಂಪನಿಯು ದೇಶೀಯ ಮಾರಾಟದಲ್ಲಿ ಶೇ.20ರಷ್ಟು ಲಾಭವನ್ನು ಪಡೆದುಕೊಂಡಿದೆ.
ಆದರೆ ದ್ವಿಚಕ್ರ ವಾಹನ ರಫ್ತಿನ ವಿಚಾರದಲ್ಲಿ ಸುಜುಕಿ ಇಂಡಿಯಾ ನಷ್ಟ ಅನುಭವಿಸಿದೆ. 2023ರ ಜುಲೈನಲ್ಲಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ವಿದೇಶಿ ಮಾರುಕಟ್ಟೆಯಲ್ಲಿ 27,527 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಈ ಬಾರಿ ಜುಲೈನಲ್ಲಿ ಈ ಸಂಖ್ಯೆ 16,112 ಯುನಿಟ್‌ಗಳಿಗೆ ಇಳಿಕೆಯಾಗಿದೆ.
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಸ್ಕೂಟರ್‌ಗಳಲ್ಲಿ ಕೆಲವು ದೋಷಗಳಿಂದಾಗಿ ಸುಮಾರು ನಾಲ್ಕು ಲಕ್ಷ ವಾಹನಗಳನ್ನು ಹಿಂಪಡೆಯಬೇಕಾಯ್ತು. ಏಪ್ರಿಲ್ 30, 2022 ಮತ್ತು ಡಿಸೆಂಬರ್ 3, 2022ರ ನಡುವೆ ತಯಾರಿಸಲಾದ ಆ ವಾಹನಗಳನ್ನು ಕಂಪನಿಯು ಹಿಂಪಡೆದಿದೆ. ಇವುಗಳಲ್ಲಿ ಪ್ರಮುಖವಾಗಿ ಆಕ್ಸೆಸ್ 125, ಬರ್ಗ್‌ಮ್ಯಾನ್ ಸ್ಟ್ರೀಟ್ 125 ಮತ್ತು ಅವೆನಿಸ್ 125 ಸೇರಿವೆ. ಇದರ ಹೊರತಾಗಿ ಸುಜುಕಿ V-Strom 800 DE ಗಾಗಿ ರೀಕಾಲ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.