HomeEntertainment'ಜಂಬೂ ಸರ್ಕಸ್' ಚಿತ್ರದ ಟೀಸರ್ ರಿಲೀಸ್

‘ಜಂಬೂ ಸರ್ಕಸ್’ ಚಿತ್ರದ ಟೀಸರ್ ರಿಲೀಸ್

ಎಂ ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ಫ್ಯಾಮಿಲಿ ಎಂಟರ್ಟೈನರ್ ಕಥಾಧಾರಿತ ‘ಜಂಬೂ ಸರ್ಕಸ್’ ಚಿತ್ರದ ಟೀಸರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆಯುವುದಲ್ಲದೆ ನೋಡುಗರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದಲ್ಲಿ ಪ್ರವೀಣ್ ತೇಜ್ ನಾಯಕ ನಟನಾಗಿ ಅಭಿನಯಿಸಿದ್ದು, ಅಂಜಲಿ ಅನೀಶ್ ಇವರಿಗೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ, ನಯನಾ, ಜಗಪ್ಪ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶ್ರೀ ಮಹತಿ ಕಂಬೈನ್ ಬ್ಯಾನರ್ ನಲ್ಲಿ hc ಸುರೇಶ್ ನಿರ್ಮಾಣ ಮಾಡಿದ್ದು, ವಾಸಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಗಣೇಶ್ ಮಾತಾಡ್ ಸಂಕಲನ, ರಘು ನಿಡವಳ್ಳಿ ಸಂಭಾಷಣೆ, A. ಹರ್ಷ ನೃತ್ಯ ನಿರ್ದೇಶನ ಹಾಗೂ ಡಾ. ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular