ಉತ್ತರ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ಮುಂದುವರೆದಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ವರುಣಾ ನದಿ ತೀರದಲ್ಲಿ ನಿರ್ಮಿಸಿದ್ದ ಎರಡು ಅನಧಿಕೃತ ಹೋಟೆಲ್ ಗಳ ತೆರವು ಕಾರ್ಯಾಚರಣೆ ವೇಳೆ ಜಟಾಪಟಿ ನಡೆದಿದೆ.
ನದಿ ತೀರದಲ್ಲಿ ಹೋಟೆಲ್ ಬನಾರಸ್ ಕೋಠಿ ಹಾಗೂ ರಿವರ್ ಪ್ಯಾಲೇಸ್ ಎಂಬ ಎರಡು ಐಷಾರಾಮಿ ಹೋಟೆಲ್ ಗಳು ನಿರ್ಮಾಣವಾಗಿದ್ದು, ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದನ್ನು ತೆರವುಗೊಳಿಸುವಂತೆ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಬಾರಿ ನೋಟಿಸ್ ನೀಡಲಾಗಿತ್ತು.
ಅಂತಿಮವಾಗಿ ಬುಲ್ಡೋಜರ್ ಬಳಸಿ ಇವುಗಳನ್ನು ತೆರವುಗೊಳಿಸಲು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಈ ವೇಳೆ ಅಧಿಕಾರಿಗಳು ಹಾಗೂ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ನಡುವೆ ವಾಗ್ವಾದ ಆರಂಭವಾಗಿದೆ. ಅಂತಿಮವಾಗಿ ಇದು ವಿಕೋಪಕ್ಕೆ ತಿರುಗಿದ್ದು ಈ ಸಂದರ್ಭದಲ್ಲಿ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಅಲೋಕ್ ಕುಮಾರ್ ಹೋಟೆಲ್ ಮಾಲೀಕನಿಗೆ ಗೂಳಿಯಂತೆ ಗುದ್ದಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
वाराणसी के एडीएम सिटी आलोक कुमार गए थे एक होटल तोड़ने. लोगों ने विरोध किया तो सांड की तरह टक्कर मार दी pic.twitter.com/LFTwK6Dn5j
— Priya singh (@priyarajputlive) July 27, 2024

