HomeEntertainment'ಬಾಲಿವುಡ್' ತಾರೆಯರ ನಿಖರ ಭವಿಷ್ಯಕ್ಕೆ ಹೆಸರಾಗಿದ್ದ ಗುರೂಜಿಯಿಂದ ಐಷ್ - ಅಭಿಷೇಕ್ 'ವಿಚ್ಛೇದನ' ವದಂತಿ ಕುರಿತು...

‘ಬಾಲಿವುಡ್’ ತಾರೆಯರ ನಿಖರ ಭವಿಷ್ಯಕ್ಕೆ ಹೆಸರಾಗಿದ್ದ ಗುರೂಜಿಯಿಂದ ಐಷ್ – ಅಭಿಷೇಕ್ ‘ವಿಚ್ಛೇದನ’ ವದಂತಿ ಕುರಿತು ಮತ್ತೊಂದು ಮಾಹಿತಿ….!

ಈಗ ಬಾಲಿವುಡ್ ಚಿತ್ರರಂಗದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಹಾಗೂ ನಟಿ ಐಶ್ವರ್ಯ ರೈ ನಡುವಿನ ವಿಚ್ಛೇದನ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಇತ್ತೀಚೆಗೆ ನಡೆದ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಇವರಿಬ್ಬರು ಪ್ರತ್ಯೇಕವಾಗಿ ಆಗಮಿಸಿದ್ದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಇದೀಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ವದಂತಿ ಕುರಿತು ಬಾಲಿವುಡ್ ತಾರೆಯರ ನಿಖರ ಭವಿಷ್ಯಕ್ಕೆ ಹೆಸರಾಗಿರುವ ಜಗನ್ನಾಥ ಗುರೂಜಿಯವರು ಮತ್ತೊಂದು ಮಾಹಿತಿ ನೀಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇವರಿಬ್ಬರೂ ವಿಚ್ಛೇದನ ಪಡೆದುಕೊಳ್ಳುವುದು ನಿಶ್ಚಿತ ಎಂದು ಅವರು ತಿಳಿಸಿದ್ದಾರೆ.

ಗ್ರಹ ನಕ್ಷತ್ರಗಳ ಪ್ರಕಾರ ಇಬ್ಬರ ನಡುವೆ ಹೊಂದಾಣಿಕೆ ಕಂಡು ಬಂದಿಲ್ಲ, ಆದರೂ ಕೂಡ ಅವರಿಬ್ಬರೂ ತಮ್ಮ ಮಗಳು ಆರಾಧ್ಯ ಸಲುವಾಗಿ ಒಂದಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇವರು ವಿಚ್ಛೇದನ ಪಡೆದುಕೊಳ್ಳಲಿದ್ದು, ಆ ಬಳಿಕವೂ ಪರಸ್ಪರ ಸ್ನೇಹಿತರಾಗಿ ಉಳಿಯಲಿದ್ದಾರೆ ಎಂದು ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular