HomeBusinessಅಂಬಾನಿ ಕುಟುಂಬದ ಬಳಿಯಿವೆ ಅತ್ಯಂತ ಐಷಾರಾಮಿ ಮನೆಗಳು…! ಬೆರಗಾಗಿಸುತ್ತೆ ಇವುಗಳ 'ವೈಭೋಗ'

ಅಂಬಾನಿ ಕುಟುಂಬದ ಬಳಿಯಿವೆ ಅತ್ಯಂತ ಐಷಾರಾಮಿ ಮನೆಗಳು…! ಬೆರಗಾಗಿಸುತ್ತೆ ಇವುಗಳ ‘ವೈಭೋಗ’

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆಗಳಿವೆ. ಮುಂಬೈನ ಆಂಟಿಲಿಯಾ ನಿವಾಸ ವಿಶ್ವದ ಅತ್ಯಂತ ದುಬಾರಿ ಕಟ್ಟಡಗಳಲ್ಲಿ ಒಂದಾಗಿದೆ. 27 ಅಂತಸ್ತಿನ ಈ ಮಹಲಿನ ಅಂದಾಜು ವೆಚ್ಚ 15000 ಕೋಟಿ ರೂಪಾಯಿ. ಅಂಬಾನಿ ಅವರಿಗೆ ಸೇರಿದ ಇಂತಹ 5 ಐಷಾರಾಮಿ ಮನೆಗಳ ವಿವರ ಇಲ್ಲಿದೆ.

ಆಂಟಿಲಿಯಾ

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಕ್ಷಿಣ ಮುಂಬೈನಲ್ಲಿರುವ 27 ಅಂತಸ್ತಿನ ಟವರ್ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯ ಅಂದಾಜು ಬೆಲೆ ಸುಮಾರು 15,000 ಕೋಟಿ ರೂಪಾಯಿ, ಅಂದರೆ ಸುಮಾರು 2 ಬಿಲಿಯನ್ ಡಾಲರ್. ಅಮೆರಿಕದ ಆರ್ಕಿಟೆಕ್ಚರ್ ಸಂಸ್ಥೆ ಪರ್ಕಿನ್ಸ್ & ವಿಲ್ ಇದನ್ನು ವಿನ್ಯಾಸಗೊಳಿಸಿದೆ. ಆಸ್ಟ್ರೇಲಿಯಾದ ಲೈಟನ್ ಹೋಲ್ಡಿಂಗ್ಸ್ ನಿರ್ಮಿಸಿದ ಎರಡನೇ ಬಂಗಲೆ ಇದು. ಇದಕ್ಕೂ ಮುನ್ನ ಬಕಿಂಗ್‌ಹ್ಯಾಮ್‌ ಅರಮನೆಯನ್ನು ಅವರೇ ನಿರ್ಮಾಣ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಂಟಿಲಿಯಾದಲ್ಲಿ ಒಂಬತ್ತು ಹೈಸ್ಪೀಡ್ ಲಿಫ್ಟ್‌ಗಳು, ಮೂರು ಹೆಲಿಪ್ಯಾಡ್‌ಗಳು, ಆರೋಗ್ಯ ಕೇಂದ್ರ, ಮಿನಿ-ಥಿಯೇಟರ್, ಯೋಗ ಸ್ಟುಡಿಯೋ, ಸ್ನೋ ರೂಮ್ ಮತ್ತು ಇತರ ಹಲವು ಐಷಾರಾಮಿ ಸೌಲಭ್ಯಗಳಿವೆ.

ಸೀ ವಿಂಡ್‌ ಟವರ್‌

ಆಂಟಿಲಿಯಾಗೆ ಶಿಫ್ಟ್‌ ಆಗುವ ಮೊದಲು ಅಂಬಾನಿ ಕುಟುಂಬ ಟವರ್ ಸೀ ವಿಂಡ್‌ನಲ್ಲಿ ವಾಸಿಸುತ್ತಿತ್ತು. ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಅಂಬಾನಿ, ಸಹೋದರ ಅನಿಲ್ ಅಂಬಾನಿ ಮತ್ತು ಅವರ ಕುಟುಂಬಗಳು ಈ ಮನೆಯಲ್ಲಿ ವಾಸಿಸುತ್ತಿದ್ದರು. 2024 ರಲ್ಲಿ ಮುಖೇಶ್ ಅಂಬಾನಿ ಸಹೋದರಿಯರು ತಮ್ಮ ತಾಯಿ ಕೋಕಿಲಾಬೆನ್ ಅಂಬಾನಿಯವರ 90ನೇ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿದ್ದಾರೆ.

ಗುಜರಾತ್‌ನಲ್ಲಿ ಪೂರ್ವಜರ ಮನೆ

ಅಂಬಾನಿ ಕುಟುಂಬ ಮೂಲತಃ ಗುಜರಾತ್‌ನ ಜುನಾಗಢ್‌ನಲ್ಲಿರುವ ಚೋರ್ವಾಡ್ ಎಂಬ ಹಳ್ಳಿಯಲ್ಲಿತ್ತು. ಇಲ್ಲಿ ಅವರ ಪೂರ್ವಜರ ಮನೆಯಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಹುಟ್ಟಿದ್ದು ಇದೇ ಮನೆಯಲ್ಲಿ. ಈ ಆಸ್ತಿ 1.2 ಎಕರೆ ಪ್ರದೇಶದಲ್ಲಿದೆ. ಈ ಮನೆಯನ್ನು ಮೊದಲು ಮಂಗರೋಲ್ವಲನೋ ಡೆಲೋ ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಅದರ ಹೆಸರನ್ನು ಧೀರೂಭಾಯಿ ಅಂಬಾನಿ ಮೆಮೋರಿಯಲ್ ಹೌಸ್ ಎಂದು ಬದಲಾಯಿಸಲಾಗಿದೆ.

ಅಡೋಬ್ ಹೌಸ್‌

ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಮುಂಬೈನ ಬಾಂದ್ರಾದಲ್ಲಿರುವ 17 ಅಂತಸ್ತಿನ ಟವರ್ ಅಡೋಬ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಐಷಾರಾಮಿ ಮನೆ 16,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. 70 ಮೀಟರ್ ಎತ್ತರವಿದೆ. ವರದಿಗಳ ಪ್ರಕಾರ ಇದರ ಮೌಲ್ಯ ಸುಮಾರು 5,000 ಕೋಟಿ ರೂಪಾಯಿ.

ಗುಲಿಟಾ

2018ರಲ್ಲಿ ಮುಖೇಶ್‌ ಅಂಬಾನಿ ಅವರ ಪುತ್ರಿ ಇಶಾ ಮತ್ತು ಅಳಿಯ ಆನಂದ್‌ ಪಿರಾಮಲ್‌ಗೆ ಈ ಮನೆಯನ್ನು ಪೋಷಕರೇ ಉಡುಗೊರೆಯಾಗಿ ನೀಡಿದ್ದರು. ಮುಂಬೈನ ವರ್ಲಿಯಲ್ಲಿ ಈ ಐಷಾರಾಮಿ ಮಹಲು ಇದೆ. ಲಂಡನ್‌ನ ಆರ್ಕಿಟೆಕ್ಚರ್ ಸಂಸ್ಥೆಯೊಂದು ಇದನ್ನು ವಿನ್ಯಾಸಗೊಳಿಸಿದೆ. ಈ ಐಷಾರಾಮಿ ಮನೆ 50 ಸಾವಿರ ಚದರ ಅಡಿ ವಿಸ್ತಾರವಾಗಿದ್ದು, ಇದರ ಅಂದಾಜು ಬೆಲೆ ಸುಮಾರು 450 ಕೋಟಿ ರೂಪಾಯಿ.

For Latest News Updates, Join Our Whatsapp Community🚩
RELATED ARTICLES

Most Popular