HomeIndiaShocking Video: ಪರಸ್ಪರ ಜಗಳದ ವೇಳೆ ನೋಡ ನೋಡುತ್ತಿದ್ದಂತೆ ಕಣಿವೆಗೆ ಉರುಳಿದ ಯುವಕ......!

Shocking Video: ಪರಸ್ಪರ ಜಗಳದ ವೇಳೆ ನೋಡ ನೋಡುತ್ತಿದ್ದಂತೆ ಕಣಿವೆಗೆ ಉರುಳಿದ ಯುವಕ……!

ಪ್ರಸಿದ್ಧ ಪ್ರವಾಸಿ ತಾಣ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹೇಂದ್ರ ಥಾರ್ ಕಾರಿನಲ್ಲಿದ್ದ ಯುವಕರ ಗುಂಪು ಹಾಗೂ ಹಿಮಾಚಲ ಪರಿವಾಹನ ಬಸ್ ಚಾಲಕ ಹಾಗೂ ನಿರ್ವಾಹಕರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಕಣಿವೆಗೆ ಉರುಳಿದ್ದಾನೆ.

ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಆದರೆ, ಇತ್ತೀಚೆಗೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದ್ದು ವೈರಲ್ ಆಗಿದೆ. ಕಾರ್ ಹಾಗೂ ಬಸ್ ಎದುರು ಬದುರು ಬಂದ ವೇಳೆ ಯಾರು ಹಿಂದಕ್ಕೆ ವಾಹನ ತೆಗೆದುಕೊಳ್ಳಬೇಕು ಎಂಬ ವಿಚಾರವಾಗಿ ಗಲಾಟೆ ಆರಂಭವಾಗಿದೆ.

ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ತಳ್ಳಿದ್ದು, ಅಲ್ಲಿ ಪೊದೆ ಇದೆ ಎಂದು ಭಾವಿಸಲಾಗಿತ್ತು. ಆದರೆ ಅದು ಆಳವಾದ ಕಮರಿ ಎಂಬುದು ನಂತರ ಗೊತ್ತಾಗಿದ್ದು, ಆ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿದು ಬಂದಿಲ್ಲ. ಈ ವಿಡಿಯೋ ವೈರಲ್ ಆಗುತ್ತಲೆ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಸುತ್ತಿದ್ದಾರೆ. ಅವರ ಪ್ರತಿಕ್ರಿಯೆಗಳು ಇಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular