HomeEntertainmentವಿವಾಹಿತ ನಟನ ಜೊತೆ ಸಾಯಿ ಪಲ್ಲವಿ ಡೇಟಿಂಗ್.......? ಸುದ್ದಿ ವೈರಲ್

ವಿವಾಹಿತ ನಟನ ಜೊತೆ ಸಾಯಿ ಪಲ್ಲವಿ ಡೇಟಿಂಗ್…….? ಸುದ್ದಿ ವೈರಲ್

ನ್ಯಾಚ್ಯುರಲ್‌ ಬ್ಯೂಟಿ ಸಾಯಿ ಪಲ್ಲವಿ ಸದ್ಯ ಸುದ್ದಿಯಲ್ಲಿದ್ದಾರೆ. ಸಾಯಿ ಪಲ್ಲವಿ ಯಾರನ್ನು ಮದುವೆ ಆಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಈ ಮಧ್ಯೆ ಸಾಯಿ ಪಲ್ಲವಿ, ವಿವಾಹಿತ ನಟನ ಜೊತೆ ಡೇಟ್‌ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ವಿವಾಹಿತ ಮಾತ್ರವಲ್ಲ ಮಕ್ಕಳ ತಂದೆ ಎಂದು ವರದಿ ಮಾಡಲಾಗಿದೆ.

ಆದ್ರೆ ಸಾಯಿ ಪಲ್ಲವಿ ಯಾವ ನಟನ ಜೊತೆ ಡೇಟ್‌ ಮಾಡ್ತಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ನಟಿಯ ಈ ಡೇಟ್‌ ವಿಷ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿದ್ದಂತೆ ಅಭಿಮಾನಿಗಳ ಪ್ರತಿಕ್ರಿಯೆ ಶುರುವಾಗಿದೆ. ಬಹುತೇಕ ಅಭಿಮಾನಿಗಳು ಇದನ್ನು ನಂಬಲು ಸಿದ್ಧವಿಲ್ಲ. ಇದೊಂದು ಸುಳ್ಳು ವದಂತಿ ಎಂದು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ.

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ನಟನ ಜೊತೆಗಿರುವ ಯಾವುದೇ ಫೋಟೋ ವೈರಲ್‌ ಆಗಿಲ್ಲ. ಸಿನಿಮಾ ಬಗ್ಗೆ ಹೇಳೋದಾದ್ರೆ ಸಾಯಿ ಪಲ್ಲವಿ ರಾಮಾಯಣ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಜೊತೆ ಅತ್ಯಂತ ದೊಡ್ಡ ಬಜೆಟ್‌ ಚಿತ್ರದಲ್ಲಿ ನಟಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular