HomeEntertainmentಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಚಿನ್ನಮ್ಮ ಹಾಡು

ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು

ಕಳೆದ ತಿಂಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಈಗಾಗಲೇ 11 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನದ್ದೇ ದರ್ಬಾರ್ ಆಗಿದ್ದು, ಕೈಲಾಶ್ ಕೇರ್ ಧ್ವನಿಗೆ ಫಿದಾ ಆಗಿದ್ದಾರೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿರುವ ಈ ಹಾಡಿಗೆ ಕೈಲಾಶ್ ಕೇರ್ ಹಾಗೂ ಇಂದು ನಾಗರಾಜ್ ಧ್ವನಿಯಾಗಿದ್ದು ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

ಶ್ರೀನಿವಾಸ್ ರಾಜು ನಿರ್ದೇಶನದ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರಶಾಂತ್ ಜೀ ರುದ್ರಪ್ಪ ನಿರ್ಮಾಣ ಮಾಡಿದ್ದು, ಗಣೇಶ್ಗೆ ಜೋಡಿಯಾಗಿ ಪಾರ್ವತಿ ನಾಯರ್ ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ, ಶರಣ್ಯಾ ಶೆಟ್ಟಿ, ಶ್ರೀನಿವಾಸಮೂರ್ತಿ, ಮಾನಸಿ ಸುಧೀರ್,  ಉಳಿದ ಪಾತ್ರವರ್ಗದಲ್ಲಿದ್ದಾರೆ. ಶಿವಸಾಯಿ ಹಾಗೂ ವಿಜಯ್ ಈಶ್ವರ್ ಅವರ ಸಂಭಾಷಣೆ ವೆಂಕಟ್ ರಾಮ್ ಪ್ರಸಾದ್ ಛಾಯಾಗ್ರಹಣ ಕೆಎಂ ಪ್ರಕಾಶ್ ಪ್ರಕಾಶ್ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular