alex Certify ಎಫ್.ಡಿ. ಬಿಟ್ಟು ಮ್ಯೂಚುವಲ್ ಫಂಡ್ ಗಳ ಮೊರೆ ಹೋಗುತ್ತಿರುವ ಗ್ರಾಹಕರು: ಬ್ಯಾಂಕುಗಳಿಗೆ ನಗದು ಸಂಕಷ್ಟ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಫ್.ಡಿ. ಬಿಟ್ಟು ಮ್ಯೂಚುವಲ್ ಫಂಡ್ ಗಳ ಮೊರೆ ಹೋಗುತ್ತಿರುವ ಗ್ರಾಹಕರು: ಬ್ಯಾಂಕುಗಳಿಗೆ ನಗದು ಸಂಕಷ್ಟ ಸಾಧ್ಯತೆ

ಮುಂಬೈ: ಇತ್ತೀಚೆಗೆ ಜನ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ(FD)ಗಳನ್ನು ಬಿಟ್ಟು ಹೆಚ್ಚಿನ ಲಾಭಗಳಿಸಲು ಮ್ಯೂಚುವಲ್ ಫಂಡ್ಸ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕುಗಳಿಗೆ ನಗದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ಯಾಂಕುಗಳಲ್ಲಿ ಬಡ್ಡಿ ಪ್ರಮಾಣ ಕಡಿಮೆ ಕಾರಣಕ್ಕೆ ಜನರು ಠೇವಣಿ ಇಡುವುದಕ್ಕಿಂತ ಮ್ಯೂಚುವಲ್ ಫಂಡ್ಸ್, ವಿಮಾ ಠೇವಣಿ, ಪಿಂಚಣಿ ಠೇವಣಿಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಒಳಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಗಿ ಬ್ಯಾಂಕುಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.

ಕಳೆದ ಐದು ವರ್ಷದಲ್ಲಿ ಮ್ಯೂಚುವಲ್ ಫಂಡ್ಸ್ ಶೇಕಡ 152ರಷ್ಟು ಹೆಚ್ಚಾಗಿದೆ. ಆದರೆ, ಬ್ಯಾಂಕುಗಳ ಎಫ್.ಡಿ. ಕೇವಲ 70ರಷ್ಟು ಮಾತ್ರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...