HomeKarnatakaರಾಜ್ಯದಲ್ಲಿ ಅಚ್ಚರಿ ಘಟನೆ ; 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ..!

ರಾಜ್ಯದಲ್ಲಿ ಅಚ್ಚರಿ ಘಟನೆ ; 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಬಾಗಲಕೋಟೆ : ರಾಜ್ಯದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ನಡೆದಿದೆ.

ಮಗುವಿನ ಬಲಗೈಗೆ 6, ಎಡಗೈಗೆ 7 ಮತ್ತು ಎರಡು ಕಾಲಿನಲ್ಲಿ ಕೂಡ 6 ಬೆರಳುಗಳಿವೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕ್ರೋಮೋಸೋಮ್ ಗಳಿಂದ ಇಂತಹ ಮಗು ಹುಟ್ಟುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ನನ್ನ ಹೆಂಡತಿ ಮಕ್ಕಳ ಭಾಗ್ಯ ಕರುಣಿಸುವಂತೆ ಕುಂದರಗಿಯ ಭುವನೇಶ್ವರಿ ದೇವಿಗೆ ಹರಕ್ಕೆ ಹೊತ್ತಿದ್ದಳು. ಹರಕ್ಕೆ ಹೊತ್ತ 4ನೇ ವಾರದಲ್ಲಿಯೇ ಗರ್ಭಿಣಿಯಾಗುವ ಅವಕಾಶ ದೊರೆಯಿತು ಎಂದು ಮಗುವಿನ ತಂದೆ ಗುರಪ್ಪ ಸಂತಸ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular