ಅನಂತ್ ಅಂಬಾನಿ, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗ ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾದರು.ಮೂರು ದಿನಗಳ ಸಮಾರಂಭಗಳಲ್ಲಿ ಬ್ಯುಸಿನೆಸ್ ಮೆನ್ ಗಳು , ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಕೆಲವು ಪ್ರಸಿದ್ಧ ಅತಿಥಿಗಳು ಭಾಗವಹಿಸಿದ್ದರು.
ಮೈಸೂರು ಕೆಫೆ ಮಾಲೀಕರಾದ ಶಾಂತೇರಿ ನಾಯಕ್ ಅವರು ಅನಂತ್ ಅಂಬಾನಿ ಮದುವೆ ಆಗಮಿಸಿದ್ರು. ಅವರನ್ನು ನೋಡ್ತಿದ್ದಂತೆ ಅನಂತ್ ಅಂಬಾನಿ ಅವರು ಹಿರಿಯರಾದ ಶಾಂತೇರಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ್ರು. ಬಳಿಕ ರಾಧಿಕಾ ಅವರನ್ನು ಕರೆದು ಮೈಸೂರು ಕೆಫೆಯ ಓನರ್ ಎಂದು ಪರಿಚಿಯಿಸಿದ್ದಾರೆ. ಈ ವಿಡಿಯೋ ಸದ್ಯ ಭಾರಿ ವೈರಲ್ ಆಗುತ್ತಿದೆ.
ಮೈಸೂರು ಕೆಫೆ ಮಾಲಕ ನರೇಶ್ ನಾಯಕ್ ಅವರ ತಾಯಿ ಶಾಂತೇರಿ ನಾಯಕ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಕೆಫೆ ಮೈಸೂರು 1936 ರಿಂದ ದಕ್ಷಿಣ ಭಾರತದ ಆಹಾರಕ್ಕಾಗಿ ಮುಂಬೈನ ಅತ್ಯಂತ ಹಳೆಯ ರೆಸ್ಟೋರೆಂಟ್ ಆಗಿದೆ.
ಶಾಂತೇರಿ ನಾಯಕ್ ಮತ್ತು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಡುವಿನ ಸಂವಾದದ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮೈಸೂರು ಕೆಫೆಯ ಮಾಜಿ ಮಾಲೀಕರನ್ನು ನೋಡಿದ ನಂತರ, ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರನ್ನು ಕರೆದು ಅವರಿಗೆ ಪರಿಚಯ ಮಾಡಿಸಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ರಾಧಿಕಾ ಮರ್ಚೆಂಟ್ ಕೂಡ ಸಂತೋಷದಿಂದ ಶಾಂತೇರಿ ನಾಯಕ್ ಅವರನ್ನು ಮಾತನಾಡಿಸಿ “ಪ್ರತಿ ಭಾನುವಾರ, ನಾವು ನಿಮ್ಮ ಹೋಟೆಲ್ ನ ಆಹಾರವನ್ನೇ ತಿನ್ನೋದು ಎಂದರು. ನಂತರ ಈ ಜೋಡಿ ತಮ್ಮ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಶಾಂತೇರಿ ನಾಯಕ್ ಅವರಿಗೆ ಧನ್ಯವಾದ ತಿಳಿಸಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.