alex Certify ರದ್ದಾಗಿದೆಯಾ ನಿಮ್ಮ ಪಡಿತರ ಚೀಟಿ ? ಇದರ ಹಿಂದಿರಬಹುದು ಈ ಕಾರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರದ್ದಾಗಿದೆಯಾ ನಿಮ್ಮ ಪಡಿತರ ಚೀಟಿ ? ಇದರ ಹಿಂದಿರಬಹುದು ಈ ಕಾರಣ….!

ನಿಮ್ಮ ಬಳಿ ಪಡಿತರ ಚೀಟಿಯಿದ್ದು, ಅದು ರದ್ದಾಗಿದ್ದರೆ ಅದಕ್ಕೆ ಎರಡು ಕಾರಣವಿದೆ. ರಾಷ್ಟ್ರದ ನಿಯಮಗಳ ಪ್ರಕಾರ, ಬಳಕೆಯಾಗದ ಆಧಾರದ ಮೇಲೆ ಮಾನ್ಯವಾದ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ. ಅನೇಕ ಅರ್ಹರು ಪಡಿತರ ಚೀಟಿಗಳನ್ನು ಹೊಂದಿರುತ್ತಾರೆ. ಆದರೆ ಅವರು ಅದನ್ನು ಬಳಸುವುದಿಲ್ಲ. ದೀರ್ಘಕಾಲದವರೆಗೆ ಪಡಿತರವನ್ನು ತೆಗೆದುಕೊಳ್ಳುವುದಿಲ್ಲ. ಹಲವು ವರ್ಷಗಳಿಂದ ಪಡಿತರ ಚೀಟಿಗಳನ್ನು ಬಳಸದೇ ಇದ್ದಾಗ, ಅವುಗಳನ್ನು ನಿಷ್ಕ್ರಿಯ ಪಡಿತರ ಚೀಟಿಗಳ ವರ್ಗಕ್ಕೆ ಸೇರಿಸಲಾಗುತ್ತದೆ. ಅಂತಹ ನಿಷ್ಕ್ರಿಯ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸುತ್ತದೆ.

ಇದಲ್ಲದೇ ಪಡಿತರ ಚೀಟಿ ರದ್ದಾಗುವ ಇನ್ನೊಂದು ಕಾರಣ ನಕಲಿ ದಾಖಲೆ ಬಳಕೆ. ನೀವು ನಕಲಿ ದಾಖಲೆ ಅಥವಾ ಮಾಹಿತಿ ಸಲ್ಲಿಸಿ ಅಕ್ರಮವಾಗಿ ಪಡಿತರ ಚೀಟಿ ಪಡೆದಿದ್ದರೆ ನಿಮ್ಮ ಪಡಿತರ ರದ್ದಾಗುತ್ತದೆ. ದೇಶದಾದ್ಯಂತ ರಾಜ್ಯ ಸರ್ಕಾರಗಳು ಅರ್ಹ ಜನರಿಗೆ ಪಡಿತರ ಚೀಟಿಗಳನ್ನು ನೀಡುತ್ತವೆ. ಅವುಗಳಲ್ಲಿ ಎರಡು ವಿಧವಿದೆ. ಒಂದು ಆದ್ಯತಾ ಕುಟುಂಬ ಪಡಿತರ ಚೀಟಿ. ಇವರಿಗೆ ಪಡಿತರ ನೀಡಲಾಗುತ್ತದೆ. ಇನ್ನೊಂದು ಆದ್ಯತಾ ರಹಿತ ಪಡಿತರ ಚೀಟಿ. ಇದು ಬರೀ ದಾಖಲೆ. ಈ ಚೀಟಿ ಹೊಂದಿರುವವರಿಗೆ ಪಡಿತರ ನೀಡಲಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...