alex Certify ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆ: ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಹೇಳಿದ್ದೇನು? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆ: ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಹೇಳಿದ್ದೇನು?

ಕೇದಾರನಾಥ: 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆಯಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಪ್ರತಿಕ್ರಿಯೆ ನೀಡಿದ್ದಾರೆ.

ಕೇದಾರನಾಥದಲ್ಲಿ ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಅಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗಲಿದೆಯೇ? ಒಂದು ವೇಳೆ ಹೀಗೇನಾದರೂ ಆದರೆ ಮತ್ತೊಂದು ಹಗರಣ ನಡೆಯಲಿದೆ ಎಂದು ಹೇಳಿದ್ದಾರೆ.

ಕೇದಾರನಾಥ ದೇವಾಲಯದಲ್ಲಿ 228 ಚಿನ್ನ ನಾಪತ್ತೆಯಾದರೂ ಈ ಬಗ್ಗೆ ಯಾವುದೇ ವಿಚಾರಣೆ, ತನಿಖೆ ನಡೆಸಲಾಗುತ್ತಿಲ್ಲ. ಇದಕ್ಕೆ ಹೊಣೆಯಾದವರು ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣ ಮಾಡುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವಿಮುಕ್ತೇಶ್ವರ ಸ್ವಾಮೀಜಿ ಈ ಹೇಳಿಕೆ ತೀವ್ರ ಕೂತುಹಲಕ್ಕೆ ಕಾರಣವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...