HomeEntertainmentವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದ 'ಬ್ಯಾಕ್ ಬೆಂಚರ್ಸ್' ಚಿತ್ರತಂಡ

ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದ ‘ಬ್ಯಾಕ್ ಬೆಂಚರ್ಸ್’ ಚಿತ್ರತಂಡ

ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ರಾಜಶೇಖರ್ ನಿರ್ದೇಶನದ ‘ಬ್ಯಾಕ್ ಬೆಂಚರ್ಸ್’ ಚಿತ್ರ ಇದೇ ಜುಲೈ 19ಕ್ಕೆ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಪ್ರಮೋಷನ್ ಕಾರ್ಯವನ್ನು ಶುರು ಮಾಡಿರುವ ಚಿತ್ರ ತಂಡ ಇದೀಗ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದೆ. ಟೀಸರ್ ವೀಕ್ಷಣೆ ಮಾಡಿರುವ ವಿನೋದ್ ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರವನ್ನು ಬಿಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮ್ಯ ನಿರ್ಮಾಣ ಮಾಡಿದ್ದು, ರಂಜನ್  ಸೇರಿದಂತೆ ಜತಿನ್ ಆರ್ಯನ್, ಆಕಾಶ್ ಎಂಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಲಿಕರ್, ಮಾನ್ಯ ಗೌಡ, ಕುಂಕುಮ್ ಎಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತ್ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ತಾರಾ ಬಳಗದಲ್ಲಿದ್ದಾರೆ.

ನಕುಲ್ ಅಬ್ಯಾಂಕರ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ ರಂಜನ್ ನರಸಿಂಹಮೂರ್ತಿ ಹಾಗೂ ಅಮರಗೌಡ ಅವರ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular