HomeIndiaಪ್ರವಾಹದ ವರದಿ ಮಾಡುತ್ತಲೇ ಆಕಸ್ಮಿಕವಾಗಿ ಮಣ್ಣುಕುಸಿದು ನದಿಗೆ ಬಿದ್ದ ವರದಿಗಾರ

ಪ್ರವಾಹದ ವರದಿ ಮಾಡುತ್ತಲೇ ಆಕಸ್ಮಿಕವಾಗಿ ಮಣ್ಣುಕುಸಿದು ನದಿಗೆ ಬಿದ್ದ ವರದಿಗಾರ

ಭಾರಿ ಮಳೆ, ಪ್ರವಾಹ ಪರಿಸ್ಥಿತಿಯಿಂದ ಜನರು ತತ್ತರಿಸುತ್ತಿರುವ ಬಗ್ಗೆ ಘಟನಾ ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದ ವರದಿಗಾರರೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದ ಘಟನೆ ನಡೆದಿದೆ.

ಅಸ್ಸಾಂ ನಲ್ಲಿ ಪ್ರವಾಹ ಪೀಡಿತ ಪ್ರದೇಶದ ಜನರ ಸಂಕಷ್ಟದ ಬಗ್ಗೆ ವರದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ವರದಿಗಾರ ತುಂಬಿ ಹರಿಯುತ್ತಿದ್ದ ನದಿ ದಡದಲ್ಲಿ ಗ್ರಾಮಸ್ಥರ ಜೊತೆ ನಿಂತು ವರದಿ ಮಾಡುತ್ತಿದ್ದರು. ರಿಪೋರ್ಟಿಂಗ್ ಮಾಡುತ್ತಿದ್ದಾಗಲೇ ವರದಿಗಾರ ನಿಂತಿದ್ದ ಸ್ಥಳ ಏಕಾಏಕಿ ಕುಸಿದಿದ್ದು, ವರದಿಗಾರ ನದಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ವರದಿಗಾರನಿಗೆ ಈಜು ಬಂದಿದ್ದರಿಂದ ಈಜುತ್ತಾ ದಡಕ್ಕೆ ಬಂದಿದ್ದು, ಗ್ರಾಮಸ್ಥರ ಸಹಾಯದಿಂದ ವರದಿಗಾರನನ್ನು ಮೇಲಕೆತ್ತಲಾಗಿದೆ. ವರದಿಗಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular