ನವದೆಹಲಿ: ದೇಶದ ಕೋಟ್ಯಂತರ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳಿಗೆ ಹ್ಯಾಕಿಂಗ್ ಆತಂಕ ಎದುರಾಗಿದೆ. ಮೊಬೈಲ್ ಬಳಕೆದಾರರಿಗೆ ಗೊತ್ತಾಗದಂತೆ ಸೂಕ್ಷ್ಮ ಮಾಹಿತಿಗಳಿಗೆ ಕನ್ನ ಹಾಕುವ ಹಾಗೂ ಮೊಬೈಲ್ ಗಳಿಗೆ ಸೂಕ್ಷ್ಮ ಮಾಹಿತಿ ಕದಿಯುವ ದುರುದ್ದೇಶದ ಕೋಡ್ ಕಳಿಸುವ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರದ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಎಚ್ಚರಿಕೆ ನೀಡಿದೆ.
ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಯಾಮ್ಸಂಗ್, ರಿಯಲ್ ಮಿ, ಒನ್ ಪ್ಲಸ್ ಸೇರಿದಂತೆ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಆ ಕಂಪನಿಗಳು ಹ್ಯಾಕಿಂಗ್ ತಡೆಯಲು ಸೆಕ್ಯೂರಿಟಿ ಪ್ಯಾಚ್ ಗಳನ್ನು ಬಿಡುಗಡೆ ಮಾಡಲು ಆರಂಭಿಸಿವೆ.
ಸೂಕ್ಷ್ಮ ಮಾಹಿತಿ ಕದಿಯಲು ಹ್ಯಾಕರ್ ಗಳು ಕೋಡ್ ದಾಳಿ ನಡೆಸುತ್ತಿದ್ದಾರೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(CERT-In) 12, v12L, v13, ಮತ್ತು v14 ಗಿಂತ ಹಿಂದಿನ Android ಆವೃತ್ತಿಗಳಲ್ಲಿ ಹೆಚ್ಚಿನ ಅಪಾಯದ ದುರ್ಬಲತೆ ಗುರುತಿಸಿದೆ. ಈ ಕಾರಣದಿಂದಾಗಿ, ಭದ್ರತಾ ದೋಷದ ವಿರುದ್ಧ ಹೆಚ್ಚಿನ ತೀವ್ರತೆಯ ಅಪಾಯದ ಎಚ್ಚರಿಕೆಯ ಎಚ್ಚರಿಕೆಯನ್ನು ಏಜೆನ್ಸಿ ಬಳಕೆದಾರರಿಗೆ ನೀಡಿದೆ. CERT-in ಹೇಳುವಂತೆ, ದುರ್ಬಳಕೆ ಮಾಡಿಕೊಂಡರೆ, ದುರ್ಬಲತೆಯು ಹ್ಯಾಕರ್ಗಳಿಗೆ ವ್ಯವಸ್ಥೆಯಲ್ಲಿ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಅನುಮತಿಸುತ್ತದೆ. ಇದರರ್ಥ ಪೀಡಿತ ಬಳಕೆದಾರರ ಸಾಧನಗಳನ್ನು ಹ್ಯಾಕರ್ನಿಂದ ಸ್ವಾಧೀನಪಡಿಸಿಕೊಳ್ಳಬಹುದು, ಅವರು ಸಾಧನದಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು.
ಹೀಗಾಗಿ ಕೋಟ್ಯಂತರ ಮೊಬೈಲ್ ಗಳಿಗೆ ಹ್ಯಾಕಿಂಗ್ ಭೀತಿ ಎದುರಾಗಿದೆ. ಹೀಗಾಗಿ ಈಗಾಗಲೇ ಕೆಲವು ಮೊಬೈಲ್ ಕಂಪನಿಗಳು ಸೆಕ್ಯೂರಿಟಿ ಪ್ಯಾಚ್ ಗಳನ್ನು ಕಳಿಸುತ್ತಿದ್ದು, ಮುಂದಿನ ವಾರಗಳಲ್ಲಿ ಉಳಿದ ಮೊಬೈಲ್ ಗಳಿಗೂ ಬರುತ್ತದೆ ಎಂದು ಹೇಳಲಾಗಿದೆ.