HomeEntertainment'ಕಡಲೂರ ಕಣ್ಮಣಿ' ಚಿತ್ರದ ಟ್ರೈಲರ್ ರಿಲೀಸ್

‘ಕಡಲೂರ ಕಣ್ಮಣಿ’ ಚಿತ್ರದ ಟ್ರೈಲರ್ ರಿಲೀಸ್

ತನ್ನ ಟೈಟಲ್ ಇಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ‘ಕಡಲೂರ ಕಣ್ಮಣಿ’ ಚಿತ್ರದ ಟ್ರೈಲರ್ ಇಂದು ಯೂಟ್ಯೂಬಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

ಈ ಚಿತ್ರವನ್ನು ರಾಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಶೈಲೇಶ್ ಆರ್ ಪೂಜಾರಿ ಹಾಗೂ ಬಸವರಾಜ ಗಾಚಿ ನಿರ್ಮಾಣ ಮಾಡಿದ್ದು, ಅರ್ಜುನ್, ನಿಶಾ, ಶಿವ ಗಿರೀಶ್, ಹರೀಶ್ ನಾಯಕ್, ವೈಭವಿ ಪ್ರಮುಖ ಪಾತ್ರದಲ್ಲಿದ್ದಾರೆ. ನಿಶಿತ್ ಪೂಜಾರಿ ಸಂಕಲನ, ಮನೋಹರ್ ಹಾಗೂ ರವಿರಾಮ್ ಅವರ ಛಾಯಾಗ್ರಹಣವಿದೆ. ರಾಮ್ ಪ್ರಸನ್ನ  ಹುಣಸೂರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular