ಬೆಂಗಳೂರು : ಡೆಂಘಿ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿ ದರ ಪಡೆಯುವ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ, ಹಳೆ ಮದ್ರಾಸ್ ರಸ್ತೆ, ಇಂದಿರಾನಗರ, ಬೆಂಗಳೂರು – 38 ಈ ವಿಳಾಸಕ್ಕೆ ದೂರು ಸಲ್ಲಿಸಬಹುದು. ಇ-ಮೇಲ್ ವಿಳಾಸ [email protected] ಅಥವಾ ಮೊಬೈಲ್ ಸಂಖ್ಯೆ 9449843037 ಕ್ಕೆ ಸಂಪರ್ಕಿಸಿ, ದೂರು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

