HomeLive Newsನಾಳೆ ಭಾರತ ಹಾಗೂ ಜಿಂಬಾಬ್ವೆ ನಡುವಣ ನಾಲ್ಕನೇ ಟಿ ಟ್ವೆಂಟಿ ಸಮರ

ನಾಳೆ ಭಾರತ ಹಾಗೂ ಜಿಂಬಾಬ್ವೆ ನಡುವಣ ನಾಲ್ಕನೇ ಟಿ ಟ್ವೆಂಟಿ ಸಮರ

ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ಎದುರು 23 ರನ್ ಗಳಿಂದ  ಭರ್ಜರಿ ಜಯ ಸಾಧಿಸುವ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ ಎರಡು ಒಂದರಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ ಜಿಂಬಾಂಬ್ವೆ ನೆಲದಲ್ಲಿ ಸರಣಿ ಗೆಲ್ಲಲು ಶುಭಮನ್ ಗಿಲ್ ಪಡೆ ಸಜ್ಜಾಗಿದೆ.

ನಾಳೆ ಹರಾರೆಯಲ್ಲಿ ಭಾರತ ಹಾಗೂ ಜಿಂಬಾಂಬ್ವೆ ನಡುವೆ ನಾಲ್ಕನೇ ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು ಜಿಂಬಾಂಬ್ವೆ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯವನ್ನು ಗೆದ್ದರೆ ಸರಣಿಯನ್ನು ಸಮ ಬಲಗೊಳಿಸಬಹುದಾಗಿದೆ. ಇಲ್ಲವಾದಲ್ಲಿ ಜಿಂಬಾಂಬ್ವೆ ತಂಡಕ್ಕೆ ತನ್ನ ತವರಿನಲ್ಲಿ ಮುಖಭಂಗವಾಗಲಿದೆ.

ಇನ್ನು ಭಾರತ ತಂಡ ಈ ಪಂದ್ಯದಲ್ಲಿ ಜಯಭೇರಿ ಆದರೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ ಉಭಯ ತಂಡಗಳಿಗೂ ಮುಖ್ಯವಾದ ಪಂದ್ಯವಾಗಿದ್ದು, ಯಾರ ಕಡೆಗೆ ಈ ಪಂದ್ಯ ವಾಲಲಿದೆ. ಕಾದು ನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular