HomeEntertainment'ರಕ್ತಾಕ್ಷ' ಚಿತ್ರದ ಟ್ರೈಲರ್ ರಿಲೀಸ್

‘ರಕ್ತಾಕ್ಷ’ ಚಿತ್ರದ ಟ್ರೈಲರ್ ರಿಲೀಸ್

ಜುಲೈ 26ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ವಾಸುದೇವ ಎಸ್ ಎನ್ ನಿರ್ದೇಶನದ  ‘ರಕ್ತಾಕ್ಷ’ ಚಿತ್ರದ ಟ್ರೈಲರನ್ನು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ನಟ ರೋಹಿತ್ ಅಭಿನಯದ ಈ ಸಿನಿಮಾ ಈಗಾಗಲೇ ತನ್ನ ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಸಾಯಿಪ್ರೊಡಕ್ಷನ್ ಬ್ಯಾನರ್ ನಲ್ಲಿ ನಟ ರೋಹಿತ್ ಅವರೇ ನಿರ್ಮಾಣ ಮಾಡಿದ್ದು, ಡಾಸ್ಮೋಡ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಟ ರೋಹಿತ್ ಸೇರಿದಂತೆ ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರೂಪ ರಾಯಪ್ಪ, ಗುರುದೇವ ನಾಗರಾಜ್, ಶಿವಮೊಗ್ಗ ರಾಮಣ್ಣ, ರಚನಾ ದಶರತ್, ವಿಲಾಸ್ ಕುಲಕರ್ಣಿ ತೆರೆ ಹಂಚಿಕೊಂಡಿದ್ದಾರೆ. ಆದರ್ಶ್ ಛಾಯಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular