HomeKarnatakaBREAKING : ದಾಖಲೆ ಸಮೇತ ಶಾಸಕ ದದ್ದಲ್ ಮಾಜಿ ಪಿಎ 'ಪಂಪಣ್ಣ' E.D ವಶಕ್ಕೆ..!

BREAKING : ದಾಖಲೆ ಸಮೇತ ಶಾಸಕ ದದ್ದಲ್ ಮಾಜಿ ಪಿಎ ‘ಪಂಪಣ್ಣ’ E.D ವಶಕ್ಕೆ..!

ಬೆಂಗಳೂರು : ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ರಾಯಚೂರಿನಲ್ಲಿ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

2 ಬ್ಯಾಗ್ ದಾಖಲೆ   ಸಮೇತ ಇಡಿ ಅಧಿಕಾರಿಗಳು ಪಂಪಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ತೀವ್ರಗೊಳಿಸಲಿದ್ದಾರೆ. ಇಡಿ ದಾಳಿಯ ಬಳಿಕ ಪಂಪಣ್ಣ ನಾಪತ್ತೆಯಾಗಿದ್ದರು. 24 ಗಂಟೆ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಪಂಪಣ್ಣನವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಆಜಾದ್ ನಗರದಲ್ಲಿನ ರಾಯಲ್ ಅಪಾರ್ಟೆಂಟ್ನಲ್ಲಿರುವ ಮನೆಯಲ್ಲಿ ದಾಳಿ ನಡೆಸಲಾಗಿತ್ತು. ಕೆಲ ದಿನಗಳ ಹಿಂದೆ ಪಿಎ ಹುದ್ದೆಗೆ ರಾಜೀನಾಮೆ ನೀಡಿರುವ ಅವರು, ನೂತನವಾಗಿ ಎಂಎಲ್ಸಿಯಾಗಿರುವ ವಸಂತಕುಮಾರ್ ಬಳಿ ಆಪ್ತ ಸಹಾಯಕರಾಗಿ ಸೇರಿಕೊಂಡಿದ್ದರು. ಇದೀಗ ಶಾಸದ ದದ್ದಲ್ ಮನೆಗೆ ಪಂಪಣ್ಣನವರನ್ನು ಕರೆದುಕೊಂಡ ಹೋದ ಇಡಿ ಅಧಿಕಾರಿಗಳು ಇನ್ನಷ್ಟು ಮಾಹಿತಿ ಕಲೆ ಹಾಕಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular