HomeIndiaಪತ್ನಿಗೆ ಕಚ್ಚಿದ ಹಾವಿನ ಸಮೇತ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಪತಿ; ಬೆಚ್ಚಿಬಿದ್ದ ಆಸ್ಪತ್ರೆ ಸಿಬ್ಬಂದಿ....!

ಪತ್ನಿಗೆ ಕಚ್ಚಿದ ಹಾವಿನ ಸಮೇತ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಪತಿ; ಬೆಚ್ಚಿಬಿದ್ದ ಆಸ್ಪತ್ರೆ ಸಿಬ್ಬಂದಿ….!

ಪತಿಯೊಬ್ಬ ತನ್ನ ಪತ್ನಿಗೆ ಕಚ್ಚಿದ ಹಾವಿನ ಸಮೇತ ಆಕೆಯನ್ನು ಬೈಕಿನಲ್ಲಿ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದು, ಆತನ ಬಳಿಯಿದ್ದ ಹಾವು ಕಂಡು ಅಲ್ಲಿನ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಇಂತಹದೊಂದು ಘಟನೆ ಬಿಹಾರದಲ್ಲಿ ನಡೆದಿದೆ.

ಭಾಗಲ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜುರ್ಕುರಿಯಾ ಗ್ರಾಮದ ನಿಶಾ ಎಂಬಾಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಆಕೆಗೆ ಹಾವು ಕಡಿದಿದೆ. ಇದರಿಂದ ಗಾಯಗೊಂಡ ನಿಶಾ ಸಹಾಯಕ್ಕಾಗಿ ಕಿರುಚಿಕೊಂಡಿದ್ದು, ಪತಿ ರಾಹುಲ್ ಓಡಿ ಬಂದಿದ್ದಾನೆ.

ಈ ಸಂದರ್ಭದಲ್ಲಿ ದೇವರ ಫೋಟೋ ಹಿಂದೆ ಅಡಗಿಕೊಂಡಿದ್ದ ಹಾವು ಕಾಣಿಸಿದೆ. ತಡ ಮಾಡದೆ ಅದನ್ನು ಹಿಡಿದ ಆತ ಬಕೆಟ್ ಒಂದರಲ್ಲಿ ತುಂಬಿಕೊಂಡು ಬಳಿಕ ತನ್ನ ಪತ್ನಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಭಾಗಲ್ಪುರದ ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆ ತಂದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲಿಗೆ ಹಾವು ನೋಡಿ ಬೆಚ್ಚಿಬಿದ್ದಿದ್ದ ವೈದ್ಯಕೀಯ ಸಿಬ್ಬಂದಿ ಬಳಿಕ ಕಚ್ಚಿದ ಹಾವು ಯಾವುದೆಂಬುದನ್ನು ಗಮನಿಸಿ ಅದನ್ನು ಹೊರ ಬಿಡಲು ಹೇಳಿದ್ದಾರೆ. ಅಲ್ಲದೆ ಕೂಡಲೇ ನಿಶಾಳನ್ನು ತುರ್ತು ಚಿಕಿತ್ಸೆಗೆ ದಾಖಲಿಸಿಕೊಂಡಿದ್ದು ಈಗ ಆಕೆ ಚೇತರಿಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular