HomeKarnatakaರಾಜ್ಯದ ಗಿಗ್ ಕಾರ್ಮಿಕರ ಗಮನಕ್ಕೆ ; ವಿಮಾ ಯೋಜನೆಗೆ ನೋಂದಣಿ ಹೇಗೆ..? ಇಲ್ಲಿದೆ ಮಾಹಿತಿ..!

ರಾಜ್ಯದ ಗಿಗ್ ಕಾರ್ಮಿಕರ ಗಮನಕ್ಕೆ ; ವಿಮಾ ಯೋಜನೆಗೆ ನೋಂದಣಿ ಹೇಗೆ..? ಇಲ್ಲಿದೆ ಮಾಹಿತಿ..!

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ʼಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆʼಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿ ಮಾಡಲಾಗಿದೆ. ಎಲ್ಲಾ ಅರ್ಹ ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವುದು.

ವಿಮಾ ಸೌಲಭ್ಯವು ಕರ್ತವ್ಯದಲ್ಲಿರುವಾಗ / ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯವಾಗುತ್ತದೆ. ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಪ್ರೀಮಿಯಂ ಪಾವತಿಸುವ ಅಗತ್ಯತೆ ಇರುವುದಿಲ್ಲ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಯೋಜನೆಯ ವಿಶೇಷತೆಗಳು
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ದೇಶದಲ್ಲಿಯೇ ಮೊದಲ ಬಾರಿಗೆ ಜಾರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಅರ್ಹ ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು.
ವಿಮಾ ಸೌಲಭ್ಯವು ಕರ್ತವ್ಯದಲ್ಲಿರುವಾಗ / ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯ.
ಯೋಜನೆಯು ಸಂಪೂರ್ಣ ಉಚಿತ, ಯಾವುದೇ ರೀತಿಯ ಪ್ರೀಮಿಯಂ ಪಾವತಿಸುವ ಅಗತ್ಯತೆ ಇಲ್ಲ

ದೊರಕುವ ಸೌಲಭ್ಯಗಳು

ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ 2.00 ಲಕ್ಷ ಹಾಗೂ ಜೀವ ವಿಮೆ ರೂ 2.00 ಲಕ್ಷ ಸೇರಿ ಒಟ್ಟು ರೂ. 4.00  ಲಕ್ಷ

ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 2.00 ಲಕ್ಷಗಳವರೆಗೆ.

ಆಸ್ಪತ್ರೆ ವೆಚ್ಚ ಮರುಪಾವತಿ ರೂ.1.00 ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ)
ಜೀವ ವಿಮಾ ರೂ. 2.00 ಲಕ್ಷಗಳು.

ನೋಂದಣಿಗೆ ಅರ್ಹ ಕಾರ್ಮಿಕರು

ಸ್ಪಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಫ್ಲೋ, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರು.

ನೋಂದಣಿಗೆ ಅರ್ಹತೆ

18 ರಿಂದ 60 ವಯೋಮಾನದವರು.
ಆದಾಯ ತೆರಿಗೆ ಪಾವತಿದಾರರಾಗಿರಬಾರದು.
ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.

ಕರ್ನಾಟಕದಲ್ಲಿ ಗಿಗ್ ವೃತ್ತಿ (ಡೆಲಿವರಿ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ.

ಅವಶ್ಯಕ ದಾಖಲೆಗಳು

* ಆಧಾ‌ರ್ ಸಂಖ್ಯೆ
• ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ
ಕಾರ್ಮಿಕ ಅಧಿಕಾರಿಗಳು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರ ಕಛೇರಿಗಳು, ಕಾರ್ಮಿಕ ಇಲಾಖೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕಾರ್ಮಿಕ ಸಹಾಯವಾಣಿ 155214 (24×7),

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular