alex Certify ನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ; ಎಂಜಿನಿಯರ್ ಪತಿ, ಅತ್ತೆ-ಮಾವ ಪೊಲೀಸ್ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ; ಎಂಜಿನಿಯರ್ ಪತಿ, ಅತ್ತೆ-ಮಾವ ಪೊಲೀಸ್ ವಶಕ್ಕೆ

ಕಲಬುರ್ಗಿ: ನವವಿವಾಹಿತೆ, ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರ್ಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.

ಅವರಾದ (ಬಿ) ಗ್ರಾಮದ ನವವಿವಾಹಿತೆ ರಂಜಿತಾ (25) ಮೃತ ಮಹಿಳೆ. ಮೃತ ರಂಜಿತಾ ಕುಟುಂಬದವರು ಪತಿ ಹಾಗೂ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪತಿ ಉಮೇಶ್ ಕಟ್ಟಿಮನಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಉಮೇಶ್ ಕಟ್ಟಿಮನಿ ನಿರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. 5 ತಿಂಗಳ ಹಿಂದಷ್ಟೇ ಉಮೇಶ್ ಹಾಗೂ ರಂಜಿತಾ ವಿವಾಹವಾಗಿತ್ತು. ಈಗ ರಂಜಿತಾ, ಪತಿ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದು ಕೊಲೆ ಆರೋಪ ಕೇಳಿಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತಾ ಪತಿ ಉಮೇಶ್, ಅತ್ತೆ-ಮಾವ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...