ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಸಿಬ್ಬಂದಿ ಎಡವಟ್ಟು ಬಯಲಾಗಿದೆ. 10 ಗಂಟೆಗಳ ಕಾಲ ಪ್ರಯಾಣಿಕರನ್ನು ವಿಮಾನದಲ್ಲಿಯೇ ಕೂಡಿಟ್ಟ ಆರೋಪ ಕೇಳಿ ಬಂದಿದೆ.
ಸ್ಪೈಸ್ ಜೆಟ್ ವಿಮಾನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಬೇಕಿತ್ತು. ತಾಂತ್ರಿಕ ದೋಷ ಎಂದು ದೆಹಲಿ ಏರ್ಪೋರ್ಟ್ ನಲ್ಲಿಯೇ ವಿಮಾನ ನಿಲ್ತಿಸಲಾಗಿದೆ. 10 ಗಂಟೆ ಕಳೆದರೂ ವಿಮಾನ ಟೇಕಾಫ್ ಆಗಿಲ್ಲ. 60 ಪ್ರಯಾಣಿಕರು ವಿಮಾನದಲ್ಲಿ ಕುಳಿತುಕೊಂಡಿದ್ದಾರೆ.
ಕನೆಕ್ಷನ್ ಫ್ಲೈಟ್ ಇದಾಗಿದ್ದು, ಕೆಲವರು 20 ಗಂಟೆಗಳಿಂದಲೂ ದೆಹಲಿ ವಿಮಾನ ನಿಲ್ದಾಣದಲ್ಲೇ ಉಳಿದುಕೊಂಡಿದ್ದಾರೆ. ನಿನ್ನೆ ರಾತ್ರಿ 7.40ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷವೆಂದು ಹೇಳಿ ನಿಲ್ದಾಣದಲ್ಲಿ 10 ಗಂಟೆಗೂ ಅಧಿಕಕಾಲ ಉಳಿಸಿಕೊಳ್ಳಲಾಗಿದೆ. ಸುಸ್ತಾದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೋರ್ಡಿಂಗ್ ಪಾಸ್ ಬದಲಾಯಿಸಿದ ಸಿಬ್ಬಂದಿ ಪ್ರಯಾಣಿಕರನ್ನು ಕೂರಿಸಿದ್ದು, ಮಾಹಿತಿ ನೀಡದೆ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಬ್ಬಂದಿ ಎಡವಟ್ಟಿನಿಂದ ಪ್ರಯಾಣಿಕರನ್ನು ವಿಮಾನದಲ್ಲಿ ಕೂಡಿಟ್ಟು ಕಾಟ ಕೊಟ್ಟಿದ್ದಾರೆ ಎಂದು ದೂರಿದ್ದು, ಸರ್ಕಾರ, ನಾಗರಿಕ ವಿಮಾನಯಾನ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.