HomeKarnatakaಶೂ-ಸಾಕ್ಸ್ ಖರೀದಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ 'ಶಿಕ್ಷಣ ಇಲಾಖೆ' ಸುತ್ತೋಲೆ

ಶೂ-ಸಾಕ್ಸ್ ಖರೀದಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ ಸುತ್ತೋಲೆ

ಬೆಂಗಳೂರು : ಎಲ್ಲಾ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶೂ-ಸಾಕ್ಸ್ ಖರೀದಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ 01 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಸಾಕ್ಸ್ ನೀಡಲು ಅನುದಾನವನ್ನು ಉಲ್ಲೇಖ 1003 ದಿನಾಂಕ: 06.06.2024ರಂದು ಬಿಡುಗಡೆಗೊಳಿಸಿದ್ದು, ಖರೀದಿ ಪ್ರಕ್ರಿಯೆಯ ಬಗ್ಗೆ ಉಲ್ಲೇಖ 2ರಲ್ಲಿ ದಿನಾಂಕ: 29.05.2024ರಂದು ಸುತ್ತೋಲೆಯನ್ನು ಈ ಕಛೇರಿಯಿಂದ ಹೊರಡಿಸಿ ನಿರ್ದೇಶನ ನೀಡಲಾಗಿದೆ.

“SHOE SOCKS PROGRAM 2024-25” ಎಂಬ ಶೀರ್ಷಿಕೆಯಡಿಯಲ್ಲಿ Google Spread sheet ಅನ್ನು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಇ-ಮೇಲ್ ಮುಖಾಂತರ ಕಳುಹಿಸಲಾಗಿದೆ. ಈ ಕುರಿತು ಕೂಡಲೇ ಕ್ರಮವಹಿಸಿ ಮಾಹಿತಿ ನಮೂದಿಸುವುದು. ಶಾಲಾ ಮುಖ್ಯಶಿಕ್ಷಕರು ಶೂ ಮತ್ತು ಸಾಕ್ಸ್ ಖರೀಧಿ ಮಾಡಿದ ವಿವರಗಳನ್ನು ಇಲಾಖಾ ತಂತ್ರಾಂಶ https://sdcedn.karnataka.gov.in Flowchart ನ್ನು ಅನುಸರಿಸಲು ಸೂಚಿಸಿದೆ. ಶಾಲಾ ಮುಖ್ಯಶಿಕ್ಷಕರು ವಿಳಂಬ ಮಾಡದೇ ಕೂಡಲೇ ಕ್ರಮವಹಿಸುವುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular