ರಾತ್ರಿ ಮೊಸರು ಸೇವನೆ ಮಾಡುವ ಅಭ್ಯಾಸವಿದೆಯೇ……? ಅದರಿಂದಾಗಬಹುದು ಗಂಭೀರ ಸಮಸ್ಯೆ….!

ಮೊಸರು ಬಹುತೇಕ ಎಲ್ಲಾ ಭಾರತೀಯರ ಆಹಾರದ ಪ್ರಮುಖ ಭಾಗವಾಗಿದೆ. ಪ್ರೋಬಯಾಟಿಕ್ಸ್, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಮೊಸರಿನಲ್ಲಿವೆ. ಹಾಗಾಗಿ ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ರಾತ್ರಿ ಮೊಸರು ಸೇವನೆ ಕೆಲವರಿಗೆ ಹಾನಿಕಾರಕ. ರಾತ್ರಿ ಮೊಸರು ತಿನ್ನುವುದರಿಂದ ಹಲವು ರೀತಿಯ ಅನಾನುಕೂಲಗಳಾಗುತ್ತವೆ.

ಜೀರ್ಣಕಾರಿ ಸಮಸ್ಯೆ

ಕೆಲವರು ರಾತ್ರಿ ಮೊಸರು ತಿಂದ ನಂತರ ಅಜೀರ್ಣ, ವಾಯು ಅಥವಾ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಮೊಸರಿನಲ್ಲಿ ಲ್ಯಾಕ್ಟೋಸ್ ಎಂಬ ಸಕ್ಕರೆ ಇರುವುದರಿಂದ ಇದು ಸಂಭವಿಸುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಲ್ಯಾಕ್ಟೋಸ್‌ ಕಿಣ್ವದ ಅಗತ್ಯವಿರುತ್ತದೆ. ಆದರೆ ವಯಸ್ಸಾದಂತೆ ದೇಹದಲ್ಲಿ ಲ್ಯಾಕ್ಟೇಸ್ ಕಿಣ್ವದ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಲ್ಯಾಕ್ಟೋಸ್ ಅಸಹಿಷ್ಣುತೆಯ ಸಮಸ್ಯೆಗೆ ಕಾರಣವಾಗಬಹುದು.

ನಿದ್ರಾ ಭಂಗ

ರಾತ್ರಿ ಮೊಸರು ತಿಂದರೆ ನಿದ್ರಾ ಭಂಗ ಉಂಟಾಗುತ್ತದೆ. ಮೊಸರಿನಲ್ಲಿ ಇರುವ ಟೈರಮೈನ್ ಎಂಬ ವಸ್ತುವು ಮೆದುಳಿನ ಮೇಲೆ ಉತ್ತೇಜಕ ಪರಿಣಾಮವನ್ನು ಬೀರುವ ಕಾರಣದಿಂದ ಇದು ಸಂಭವಿಸುತ್ತದೆ.

ಕೀಲು ನೋವು

ರಾತ್ರಿ ಮೊಸರು ತಿನ್ನುವುದರಿಂದ ಸಂಧಿವಾತ ಅಥವಾ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಮತ್ತಷ್ಟು ತೊಂದರೆ ಆಗಬಹುದು. ಆಯುರ್ವೇದದ ಪ್ರಕಾರ ರಾತ್ರಿ ಮೊಸರು ತಿನ್ನುವುದರಿಂದ ಕೀಲುಗಳಲ್ಲಿ ಬಿಗಿತ ಮತ್ತು ನೋವು ಹೆಚ್ಚಾಗುತ್ತದೆ.

ತೂಕ ಹೆಚ್ಚಳ

ಮೊಸರು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದರೂ ಕೊಬ್ಬನ್ನು ಸಹ ಹೊಂದಿರುತ್ತದೆ. ರಾತ್ರಿಯಲ್ಲಿ ದೇಹದ ಚಟುವಟಿಕೆಗಳು ಕಡಿಮೆಯಾಗುತ್ತವೆ, ಅಂತಹ ಪರಿಸ್ಥಿತಿಯಲ್ಲಿ ಕೊಬ್ಬಿನ ಶೇಖರಣೆಯ ಸಾಧ್ಯತೆಯಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ರಾತ್ರಿ ಮೊಸರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಮೊಸರು ಸೇವನೆಗೆ ಸರಿಯಾದ ವಿಧಾನ…

ಮೊಸರನ್ನು ಯಾವಾಗಲೂ ಹಗಲಿನಲ್ಲಿ ತಿನ್ನಬೇಕು. ರಾತ್ರಿಯಲ್ಲೂ ಇದನ್ನು ಸೇವಿಸಲು ಬಯಸಿದರೆ, ಅದರಿಂದ ಮಜ್ಜಿಗೆಯನ್ನು ತಯಾರಿಸಿಕೊಂಡು ಸೇವನೆ ಮಾಡುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read