HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ವಿನೋದ್ ರಾಜ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ವಿನೋದ್ ರಾಜ್

ಖ್ಯಾತ ಹಿರಿಯ ನಟ ವಿನೋದ್ ರಾಜ್ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

1987ರಲ್ಲಿ ತೆರೆ ಕಂಡ ‘ಡ್ಯಾನ್ಸ್ ರಾಜ ಡ್ಯಾನ್ಸ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ತಮ್ಮ ನೃತ್ಯದ ಮೂಲಕವೇ ಗಮನ ಸೆಳೆದರು. ಬಳಿಕ ‘ಶ್ರೀ ವೆಂಕಟೇಶ್ವರ ಮಹಿಮೆ’ ‘ಕೃಷ್ಣ ನೀ ಕುಣಿದಾಗ’ ‘ಕಾಲೇಜ್ ಹೀರೋ ‘ ಹೀಗೆ ವರ್ಷಕ್ಕೆ ಒಂದೊಂದು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.

ನಾಯಕನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ  ಅಭಿನಯಿಸಿರುವ ಇವರು ‘ಕನ್ನಡದ ಕಂದ’ ‘ಶುಕ್ರ’ ಸೇರಿದಂತ 2009 ರಂದು ‘ಯಾರದು’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ತಮ್ಮ ಸಮಾಜ ಸೇವೆಯ ಮೂಲಕವೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಹಿರಿಯ ಕಲಾವಿದರು ಸೇರಿದಂತೆ ಯುವ ನಟ, ನಟಿಯರು ವಿನೋದ್ ರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular