ಬೆಂಗಳೂರು: ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018 -20 ದ್ವೈವಾರ್ಷಿಕ ಅವಧಿಗೆ ಬೋನಸ್ ಘೋಷಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರಿ ವಿಮಾ ಯೋಜನೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ ದಿನಾಂಕ 1.4.2018 ರಿಂದ 31.3.2020ರ ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗೆ ಪ್ರತಿ ವರ್ಷಕ್ಕೆ 80 ರೂಪಾಯಿ ಬೋನಸ್ ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಅವಧಿ ಪೂರ್ಣ, ಮರಣ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ 01.04.2020 ರಿಂದ 31.03.2022 ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗೆ ಪ್ರತಿ ವರ್ಷಕ್ಕೆ 80 ರೂ. ನಂತೆ ಮಧ್ಯಂತರ ಲಾಭಾಂಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.